ಹಾಸನ: ಮುರುಗೇಶ್ ನಿರಾಣಿಯವರು ಇತ್ತಿಚೆಗೆ ಬಿ ವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದರು. ಸಿಎಂ ಆದರೆ ತಪ್ಪೇನು ಎಂದಿದ್ದರು. ಆ ಬಗ್ಗೆ ವಿಜಯೇಂದ್ರ ಅವರು ಇಂದು ಪ್ರತಿಕ್ರಿಯೆ ನೀಡಿದ್ದು, ನಾನಿನ್ನು ಸಾಮಾನ್ಯ ಕಾರ್ಯಕರ್ತ. ಕಳೆದ ಐದಾರು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಈಗ ರಾಜ್ಯದ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಾ ಇದ್ದೇನೆ. ನನ್ನ ಕಣ್ಣ ಮುಂದೆ ಇರುವಂಥದ್ದು, ಪಕ್ಷ ನಂಗೆ ಜವಬ್ದಾರಿ ಕೊಟ್ಟಿದೆ. ಪಕ್ಷದ ಸಂಘಟನೆ ಮಾಡಬೇಕು ಅಂತೇಳಿ ಅದನ್ನು ಕಣ್ಣ ಮುಂದೆ ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಹೊರತು, ಮುಂದೆ ಎಂಎಲ್ಎ ಆಗಬೇಕು, ಮುಖ್ಯಮಂತ್ರಿಯಾಗಬೇಕು ಎಂಬಂಥ ಪ್ರಶ್ನೆ ಉದ್ಭವವಾಗುವುದಿಲ್ಲ.
ಇವತ್ತು ನಮ್ಮ ರಾಜ್ಯದಲ್ಲೂ ಲಕ್ಷಾಂತರ ಕಾರ್ಯಕರ್ತರು ಯಾವುದೇ ಸ್ಥಾನಮಾನವಿಲ್ಲದೆ ಪಕ್ಷಕ್ಕಾಗಿ ದುಡಿಯುವಂತ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಇದ್ದಾರೆ. ಹಾಗಾಗಿ ಈ ರೀತಿಯ ಚರ್ಚೆಗಳು ಸಹ ಅವಶ್ಯಕತೆ ಇಲ್ಲ ಎಂದು ನಾನಂತು ಭಾವಿಸಿದ್ದೇನೆ. ನಾನಂತು ಸ್ಷಪ್ಟವಾಗಿದ್ದೇನೆ. ಮುಂದೆ ಯಾವ ರೀತಿ ಹೋಗಬೇಕು, ಪಕ್ಷಕ್ಕೆ ಯಾವ ರೀತಿ ಬಲ ಕೊಡುವಂತ ಕೆಲಸ ಮಾಡಬೇಕು. ಅದನ್ನು ಕಣ್ಣ ಮುಂದೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಬಹಳ ದೊಡ್ಡ ಮಾತನ್ನು ನಿರಾಣಿಜಿ ಅವರು, ನಾರಾಯಣ ಗೌಡರು ಎಲ್ಲರೂ ಕೂಡ ಹೇಳಿದ್ದಾರೆ. ನಾನು ಇಷ್ಟಂತು ಹೇಳ್ತೇನೆ ನನ್ನ ಹಣೆಬರದಲ್ಲಿ ಏನು ಬರೆದಿದೆ ಅದನ್ನು ಯಾರು ಬದಲಾಯಿಸಲು ಆಗಲ್ಲ. ನನ್ನ ಕಣ್ಣಮುಂದೆ ಇರುವುದು ಪಕ್ಷದ ಸಂಘಟನೆಯಷ್ಟೇ. ಅದನ್ನು ಬಿಟ್ಟರೆ ಬೇರೆ ಏನನ್ನಹ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ಪಕ್ಷದ ಸಂಘಟನೆ ಮಾಡಬೇಕು. ಹೀಗಾಗಿ ರಾಜ್ಯದ್ಯಂತ ಪ್ರವಾಸ ಮಾಡಿ, ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬ ಬೇಕು ಎಂದಿದ್ದಾರೆ.