ನವದೆಹಲಿ: ದೆಹಲಿಯ ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ ಮಳೆ ದಾಖಲಾಗಿದ್ದು, ಬಿರು ಬಿಸಿಲಿನ ಶಾಖದಿಂದ ಬಿಡುವು ನೀಡಿದೆ. ಮಧ್ಯಾಹ್ನ 2.30 ರಿಂದ 5.30 ರ ನಡುವೆ ಸುಮಾರು 2.4 ಮಿಮೀ ಮಳೆ ದಾಖಲಾಗಿದೆ. ಇಂದು ಬೆಳಿಗ್ಗೆ 5.30 ರ ಸುಮಾರಿಗೆ ಸಾಪೇಕ್ಷ ಆರ್ದ್ರತೆಯು ಶೇಕಡಾ 79 ರಷ್ಟಿತ್ತು.
ಮಾನ್ಸೂನ್ ಮಳೆಯೂ ಜೂನ್ 27ಕ್ಕೆ ಆರಂಭವಾಗಬೇಕಿತ್ತು. ಆದರೆ ಕಳೆದ ವರ್ಷದಂತೆ ಈ ವರ್ಷವೂ ನವದೆಹಲಿಯಲ್ಲಿ ಮಾನ್ಸೂನ್ ಮಳೆ ವಿಳಂಬವಾಗಿದೆ. ಮೋಡ ಕವಿದ ವಾತಾವರಣ, ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆ, ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಿದೆ. ಅಷ್ಟೆ ಅಲ ಗಂಟೆಗೆ 35 ರಿಂದ 45 ಕಿಮೀ ವೇಗದ ಗಾಳಿ ಮಳೆಯ ಮುನ್ಸೂಚನೆಯನ್ನು ಕೇಂದ್ರ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರದಂದು ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. IMD ಗುರುವಾರ ಮತ್ತು ಶುಕ್ರವಾರ ದೆಹಲಿಗೆ ‘ಎಲ್ಲೋ’ ಎಚ್ಚರಿಕೆಯನ್ನು ನೀಡಿದ್ದು, ಮಳೆ ಜೋರಾಗುವ ಸೂಚನೆಯಿದ್ದು, ಎಲ್ಲರು ಎಚ್ಚರಿಕೆಯಿಂದಿರಲು ಸೂಚಿಸಿದೆ.
ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರಾಖಂಡ, ಪೂರ್ವ ರಾಜಸ್ಥಾನ, ಬಿಹಾರ, ಗೋವಾ ಮತ್ತು ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನೀಡಿದೆ.