ನವದೆಹಲಿ: ಹವಮಾನ ಇಲಾಖೆ ಮುಂಗಾರು ಮಳೆ ಬಗ್ಗೆ ಮಾಹಿತಿ ನಿಡೀದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ ಎಂದಿದೆ. ಜೂನ್ 2ರಿಂದಲೇ ಮುಂಗಾರು ಆರಂಭವಾಗಲಿದ್ದು, ರೈತರಿಗೆ ಸಂತಸ ತರಲಿದೆ.
ಜೂನ್ 1ರಿಂದಲೇ ಕರ್ನಾಟಕದಲ್ಲಿ ಮುಂಗಾರು ಆರಂಭವಾಗಲಿದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 2 ಅಥವಾ 3ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ಮಾನ್ಸೂನ್ ಋತುವಿನಲ್ಲಿ ಬೀಳುವ ಸರಾಸರಿ ಮಳೆ ಪ್ರಮಾಣ ಶೇ.103ರಷ್ಟು ಆಗಿರುತ್ತದೆ ಎಂದು ಭಾರತೀಯ ಹವಮಾನ ಇಲಾಖೆ ಈಗಾಗಲೇ ತಿಳಿಸಿದೆ. ಸತತ ನಾಲ್ಕನೇ ವರ್ಷ ಭಾರತವೂ ಸಾಮಾನ್ಯ ಮಳೆಗಾಲವನ್ನು ನೋಡುವ ಸಾಧ್ಯತೆ ಇದೆ.