ವಿಜಯನಗರ: ಇತ್ತೀಚೆಗಷ್ಟೇ ಹೊಸ ಜಿಲ್ಲೆಯಾಗಿ ಅಧಿಕೃತವಾಗಿ ಅನೌನ್ಸ್ ಆದ ವಿಜಯನಗರದಲ್ಲಿ ಜನ ಹೈರಾಣಾಗಿದ್ದಾರೆ. ಕೋತಿ ಕಾಟಕ್ಕೆ ಸುಸ್ತಾಗಿದ್ದಾರೆ. ಕೊಟ್ಟೂರು ತಾಲೂಕಿನ ಗಜಾಪುರ ಗ್ರಾಮದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ. ಇದು ಅಲ್ಲಿನ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಗ್ರಾಮದಲ್ಲಿ ಮಂಗಗಳು ಹೆಚ್ಚಾಗಿದ್ದು, ರಸ್ತೆಯಲ್ಲಿ ಓಡಾಡುವವರನ್ನು ಬಿಡುತ್ತಿಲ್ಲ.. ಮನಸ್ಸೊ ಇಚ್ಛೇ ದಾಳಿ ಮಾಡುತ್ತಿವೆ. ಈಗಾಗಲೇ 15 ಕ್ಕೂ ಹೆಚ್ಚು ಮಂದಿ ಮಂಗಗಳ ದಾಳಿಗೆ ಒಳಗಾಗಿದ್ದಾರೆ.
ಈ ಮಂಗಗಳ ಕಾಟ ನಿನ್ನೆ ಮೊನ್ನೆಯದ್ದಲ್ಲ.. ಕಳೆದ ಎರಡು ವರ್ಷಗಳಿಂದಲೂ ಕೋತಿಗಳ ಕಾಟ ಜೋರಾಗಿದೆ.. ರಸ್ತೆಯಲ್ಲಿ ಓಡಾಡುವವರು, ಬೈಕ್ ನಲ್ಲಿ ತೆರಳುವವರನ್ನ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡ್ತಿವೆ. ಆದ್ರೆ ಅರಣ್ಯಾಧಿಕಾರಿಗಳು ಮಾತ್ರ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ.. ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಸದ್ಯಕ್ಕೆ ಗಾಯಗೊಂಡವರಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದು, ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.