ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಐತಿಹಾಸಿಕ ಸ್ಥಳಗಳಾದ ಅಶೋಕನ ಶಿಲಾ ಶಾಸನ, ಜಟಿಂಗರಾಮೇಶ್ವರ, ಶ್ರೀ ನುಂಕಮಲೆಸಿದ್ದೇಶ್ವರ ದೇವಸ್ಥಾನದಂತಹ ಪುರಾತನ ಸ್ಥಳಗಳಲ್ಲಿ ಪುರಾತನ ನಿಧಿ, ಶಾಸನ, ವಿಗ್ರಹಗಳನ್ನ ಕಳುವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಕರ್ನಾಟಕ-ಆಂದ್ರಪ್ರದೇಶ-ತಮಿಳುನಾಡು ರಾಜ್ಯದವರಾದ 09 ಮಂದಿ ಅಂತರ್ ರಾಜ್ಯ ನಿಧಿ ಕಳ್ಳರನ್ನು ಮೊಳಕಾಲ್ಮೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯವರಾದ
1] ತಿಮ್ಮರಾಜು ತಂದೆ ಮರಿಸ್ವಾಮಿ ಭೈರಾಪುರ ಗ್ರಾಮ, ಮೊಳಕಾಲ್ಮೂರು ತಾಲೂಕು,
2] ರಾಮಾಂಜಿನಿ ತಂದೆ ಪಾತಯ್ಯ, 45 ವರ್ಷ, ತೆಂಗಿನಗೌರಸಮುದ್ರ ಗ್ರಾಮ, ಮೊಳಕಾಲ್ಮೂರು ತಾಲ್ಲೂಕು,
3] ಟಿ.ಸಣ್ಣಪ್ಪ ತಂದೆ ತಿಮ್ಮಣ್ಣ, ಸುಮಾರು 60 ವರ್ಷ, ಗುಂಡೂರು ಗ್ರಾಮ, ಮೊಳಕಾಲ್ಮೂರು ಟೌನ್.
4] ಮೈಲಾರಪ್ಪ ತಂದೆ ಈರನಾಗಪ್ಪ, ಸುಮಾರು 52 ವರ್ಷ, ಬೊಮ್ಮಲಿಂಗೇನಹಳ್ಳಿ, ಗ್ರಾಮ, ಮೊಳಕಾಲ್ಮೂರು ತಾಲ್ಲೂಕು,
ತಮಿಳುನಾಡಿನ
5] ವೇಣು ತಂದೆ ಜಿ,ಗೋಪಾಲಪ್ಪ, 38 ವರ್ಷ, ಕೃಷ್ಣಗಿರಿ ಜಿಲ್ಲೆ,
6] ಎಂ.ಆರ್.ಮಂಜುನಾಥ ತಂದೆ ಮುನಿಯಪ್ಪ, ಸುಮಾರು 42 ವರ್ಷ, ಪ್ಲಂಬರ್, ತಳಿಕೊತ್ತೂಯಾರ್, ಕೃಷ್ಣಗಿರಿ ಜಿಲೆ,
7] ಎಂ.ಆನಂದ ತಂದೆ ಮುತ್ತಪ್ಪ, ಸುಮಾರು 36 ವರ್ಷ ಡ್ರೈವರ್ ಕೆಲಸ, ಎನ್.ಕೊತ್ತೂರು, ಕೃಷ್ಣಗಿರಿ ಜಿಲ್ಲೆ,
ಮತ್ತು ತೆಲಂಗಾಣದ
8] ಸಲ್ಕಾಪುರಂ ಶ್ರೀನಿವಾಸಲು ತಂದೆ ಸಲ್ಕಾಪುರ ತಿಮ್ಮಯ್ಯ, ಸುಮಾರು 45 ವರ್ಷ, ಚಿನ್ನೋನಿಪಲ್ಲಿ, ತೆಲಂಗಾಣ ರಾಜ್ಯ.
9] ವೆಂಕಟೇಶ ತಂದೆ ಮಲ್ಲದಣ್ಯ, ಸುಮಾರು 40 ವರ್ಷ, ಚಿನ್ನೋನಿಪಲ್ಲಿ ಎಂದು ಗುರುತಿಸಲಾಗಿದೆ.
ಇವರೆಲ್ಲರೂ ನಿನ್ನೆ (ಮಾರ್ಚ್. 22 ರಂದು ) ಭೈರಾಪುರ-ಹಿರೇಕೆರೆಹಳ್ಳಿ, ಗ್ರಾಮಗಳ ಮಧ್ಯದಲ್ಲಿರುವ ವಿಭೂತಿ ಗುಡ್ಡದಲ್ಲಿ ಇನ್ನೊವಾ ಕಾರಿನಲ್ಲಿ ಉಪಕರಣಗಳನ್ನಿಟ್ಟುಕೊಂಡು ಅನುಮಾನಾಸ್ಪದವಾಗಿ ಗುಡ್ಡಗಳ ಸುತ್ತಾ-ಮುತ್ತಾ, ತಿರುಗಾಡುತ್ತಾ ಭೂಮಿಯನ್ನು ಶೋಧಿಸುತ್ತಿದ್ದರು. ಸ್ಥಳಿಯರು ನೀಡಿದ ಖಚಿತವಾದ ಮಾಹಿತಿ ಮೇರೆಗೆ ಮೊಳಕಾಲ್ಮೂರು ಪೊಲೀಸರು ಬಂಧಿಸಿ ಅವರಿಂದ ಇನ್ನೋವಾ ಕಾರ್, ಜನರೇಟರ್, ಡ್ರಿಲ್ಲಿಂಗ್ ಮಿಶಿನ್, 20 ಮೀಟರ್ ಉದ್ದದ ವೈರ್, ನಾಲ್ಕು ಪ್ಲಾಸ್ಟಿಕ್ ಪುಟ್ಟಿ, ಮೂರು ಸಲಿಕೆ ಯನ್ನು ವಶಪಡಿಸಿಕೊಂಡಿದ್ದಾರೆ.
ಈ ಅಂತರ್ ರಾಜ್ಯ ನಿಧಿಗಳ್ಳರನ್ನು ಪತ್ತೆಹಚ್ಚಲು
ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ
ರಾಜಣ್ಣ, ಟಿ.ಬಿ, ಮೊಳಕಾಲ್ಮೂರು ವೃತ್ತ ನಿರೀಕ್ಷಕರಾದ ವಸಂತ ವಿ ಅಸೋದೆರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ಈರೇಶ, ಮತ್ತು, ಪಾಂಡುರಂಗ ಮತ್ತು ಸಿಬ್ಬಂದಿಯವರನ್ನು ತಂಡವನ್ನು ರಚಿಸಲಾಗಿರುತ್ತದೆ. ಈ ತಂಡವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ
ರಂಜಿತ್ ಕುಮಾರ್ ಬಂಡಾರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ, ಜಿ.ಎಸ್. ರವರು ಪ್ರಶಂಶಿಸಿರುತ್ತಾರೆ.
ಸಾಮಾನ್ಯವಾಗಿ ಕೆಲವೊಬ್ಬರಿಗೆ ಕೆಮ್ಮು ಆದ್ರೆ ತಿಂಗಳು ಗಟ್ಟಲೇ ಕಡಿಮೆ ಆಗುವುದೇ ಇಲ್ಲ. ಎಷ್ಟೇ ಮಾತ್ರೆಗಳನ್ನ ನುಂಗಿದರು ವಾಸಿಯಾಗುವುದೇ ಇಲ್ಲ. ಕೆಮ್ಮಿ…
ಈ ರಾಶಿಯವರಿಗೆ ಕಷ್ಟಕಾಲದಲ್ಲಿ ಪತ್ನಿಯ ಧನ ಸಹಾಯದಿಂದ ಮರುಜೀವ, ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ವಿಳಂಬ, ಈ ರಾಶಿಯವರು ತುಂಬಾ…
ಬೆಂಗಳೂರು; ಕಳೆದ ಕೆಲವು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರು ಬಳಲುತ್ತಿದ್ದಾತೆ. ವೀಲ್ ಚೇರ್ ಮೇಲೆಯೇ ಓಡಾಟ…
ಚಿತ್ರದುರ್ಗ. ಮಾ.25: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮಾರ್ಚ್ 28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2…
ಸುದ್ದಿಒನ್, ಹೊಸದುರ್ಗ, ಮಾರ್ಚ್. 25 : ರೈತರು ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲು 15000 ರೂಪಾಯಿ ಲಂಚ…
ಚಿತ್ರದುರ್ಗ. ಮಾರ್ಚ್ 25: ಮುಂಬರುವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಯಾವುದೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ…