ಉತ್ತರ ಕನ್ನಡ: ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದಲ್ಲಿ ಪ್ರತಿವರ್ಷ ವೀರಭದ್ರೇಶ್ವರ ಮತ್ತು ಚೌಡೇಶ್ವರಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಸಂದರ್ಭದಲ್ಲಿ ಭಕ್ತರು ಬಹು ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ, ದೇವರಲ್ಲಿ ಭಕ್ತಿ, ಶ್ರದ್ಧೆಯಿಂದ ಬೇಡಿಕೊಳ್ಳುತ್ತಾರೆ. ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹರಕೆ ಸಕ್ಸಸ್ ಆದ ಬಳಿಕ ದೇವರ ಜಾತ್ರೆಗೆ ಬಂದು ಕೊಂಡ ಹಾಯುತ್ತಾರೆ.
ಇದೀಗ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಹೊತ್ತ ಹರಕೆ ತೀರಿಸಲು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ. ಕೊಂಡವನ್ನು ಹಾಯ್ದಿದ್ದಾರೆ. ಭಕ್ತರ ಜೊತೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಕೂಡ ಕೊಂಡ ಹಾಯ್ದಿದ್ದಾರೆ.
ದೇವರ ದರ್ಶನ ಮಾಡಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಕೂಡ ಕೊಂಡ ಹಾಯ್ದಿದ್ದಾರೆ. ಈ ಹಿಂದೆ ದೇವಸ್ಥಾನಕ್ಕೆ ಬಂದಾಗ ವೀರಭದ್ರೇಶ್ವರ ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಆಪ್ತ ಮೂಲಗಳು ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದು, ಇಷ್ಟಾರ್ಥ ಸಿದ್ಧಿಸಿದ ಬಳಿಕ ಸಚಿವರು ಕೊಂಡ ಹಾಯ್ದಿದ್ದಾರೆ ಎನ್ನಲಾಗಿದೆ.