ಬಾಗಲಕೋಟೆ: ನಾಳೆಯಿಂದ ಎಸ್ಎಸ್ಎಲ್ಎಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಮಕ್ಕಳಿಗೆ ಶಿಕ್ಷಣ ಸಚಿವ ನಾಗೇಶ್ ಧೈರ್ಯ ತುಂಬಿದ್ದಾರೆ. ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷ ಮಕ್ಕಳು ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ಕೊರೊನಾ ಸ್ವಲ್ಪ ಕಡಿಮೆಯಾದ ಹಿನ್ನೆಲೆ, ಮೂರನೇ ಅಲೆ ಕಾಣಿಸಿಕೊಳ್ಳದ ಹಿನ್ನೆಲೆ ಶಾಲಾ ಕಾಲೇಜು ಎಂದಿನಂತೆ ನಡೆಯುತ್ತಿದೆ.
ನಾಳೆಯಿಂದ SSLC ಪರೀಕ್ಷೆ ಶುರುವಾಗಿದ್ದಯ, ಬಾಗಲಕೋಟೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವರು, SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಆತಂಕ ಬೇಡ. ಶೇ.80 ರಷ್ಟು ಮುಗಿದಿರುವ ಪಠ್ಯದಿಂದಲೇ ಪ್ರಶ್ನೆ ಪತ್ರಿಕೆ ಬರುತ್ತದೆ. ಜೊತೆಗೆ ಈ ಬಾರಿಯ ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ ಪ್ರಶ್ನೆಗಳು ಹೆಚ್ಚಿರುತ್ತವೆ. ಪಠ್ಯ ಮುಗಿಯದೆರ ಇರುವ ಶಾಲೆ ಮಕ್ಕಳಿಗೆ ಬೇರೆ ಪ್ರಶ್ನೆ ನೀಡಲಾಗುತ್ತದೆ.
ಬೇರೆ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಪರೀಕ್ಷೆಯಲ್ಲಿರಲಿದೆ. ಹೀಗಾಗಿ ಮಕ್ಕಳು ಪರೀಕ್ಷೆ ಬಂದಿದೆ ಎಂದು ಭಯಪಡುವ ಅಗತ್ಯವಿಲ್ಲ. ನಿರಾತಂಕವಾಗಿ ಎಲ್ಲಾ ಮಕ್ಕಳು ಪರೀಕ್ಷೆಯನ್ನ ಬರೆಯಿರಿ ಎಂದು ಶಿಕ್ಷಣ ಸಚಿವ ನಾಗೇಶ್ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.