ಧಾರವಾಡ: ಈ ಬಾರಿ ಪಠ್ಯ ಪರಿಷ್ಕರಣೆ ಆದ ಮೇಲೆ ಸಾಕಷ್ಟು ಅವಾಂತರವನ್ನು ಸರ್ಕಾರ ಎದುರಿಸಿದೆ. ವಿರೋಧ ಎದುರಾಗಿದೆ. ಪಠ್ಯಪುಸ್ತಕದಲ್ಲಿನ ಮಿಸ್ಟೇಕ್ ಗಳು ಸಾಕಷ್ಟು ವೈರಲ್ ಆಗುತ್ತಿದೆ. ಅದರಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ವಿಭಾಗದ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಧ್ವನಿ ಎದ್ದಿದೆ. ಲೋಪದೋಷದ ಬಗ್ಗೆ ಮಾತನಾಡಿದ ಸಚಿವ ಬಿ ಸಿ ನಾಗೇಶ್, ಪರಿಷ್ಕರಣೆ ಮಾಡುವಾಗ ತಪ್ಪು ಮಾಡಬಾರದು ಎಂದು ಹೇಳಿದ್ದಾರೆ.
ಇಂಥದ್ದೊಂದು ಜವಬ್ದಾರಿ ಸಿಕ್ಕಾಗ ಜಾಗರೂಕತೆಯಿಂದ ಇರಬೇಕಾಗುತ್ತದೆ. ತಪ್ಪು ಆಗಿದ್ದನ್ನು ನಾವೂ ಗಮನಿಸಿದ್ದೇವೆ. ಅದರ ಮರುಪರಿಷ್ಕರಣೆಗೆ ಮುಂದಾಗಿದ್ದೇವೆ. ವಾದ – ವಿವಾದ ಮುಖ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರಬಾರದು ಎಂದಿದ್ದಾರೆ.
ಲೋಪದೋಷಗಳನ್ನು ಯಾರೇ ತೋರಿಸಿದರು ಸರಿ ಮಾಡುತ್ತೇವೆ. ತಪ್ಪನ್ನು ಮುಚ್ಚಿಡುವ ಕೆಲಸ ಮಾಡುತ್ತಿಲ್ಲ. ಸಾಹಿತಿಗಳನ್ನು ಕೂಡ ಯಾವುದೇ ಕಾರಣಕ್ಕೂ ಕಡೆಗಣಿಸುತ್ತಿಲ್ಲ. ಮಹಾರಾಜರನ್ನು ತೆಗೆದು ಟಿಪ್ಪು ಸುಲ್ತಾನ್ ರನ್ನು ತರಲಾಗಿತ್ತು. ಸಿಂಧು ಸಂಸ್ಕೃತಿ ತೆಗೆದು ನೆಹರೂ ಪಾಠ ಮಾಡಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪಾಠದಲ್ಲಿ ತರಲಾಗಿತ್ತು. ಇಂಥ ಸಾಕಷ್ಟು ಉದಾಹರಣೆಗಳನ್ನು ಈ ಹಿಂದಿನ ಪಠ್ಯದ ಬಗ್ಗೆ ಹೇಳಬಹುದು.
ಕುವೆಂಪು ಅವರಿಗೆ ಅವಮಾನ ಮಾಡಿದ ವಿಚಾರ ಬರಗೂರು ರಾಮಚಂದ್ರಪ್ಪ ಅವರಿಗೆ ಸಲ್ಲುತ್ತದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ನಾಡಗೀತೆಗೆ ಅವಮಾನವಾಗಿತ್ತು. ಪಠ್ಯ ಪುಸ್ತಕವನ್ನು ಒಬ್ಬರೆ ಮಾಡುವುದಿಲ್ಲ. ತಪ್ಪು ಆಗಿದೆ, ಅದನ್ನು ಪರಿಷ್ಕರಣೆ ಮಾಡುತ್ತೇವೆ ಎಂದಿದ್ದಾರೆ.