ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಡೀ ಕರ್ನಾಟಕದ ಜನತೆಯನ್ನ ಅಗಲಿ ಇಂದಿಗೆ ಐದು ದಿನ..ಈಗಲೂ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ವಾ ಅನ್ನೋ ಸತ್ಯವನ್ನ ನಂಬೋದಕ್ಕೆ ಸಾಧ್ಯವಾಹ್ತಾ ಇಲ್ಲ. ಅಪ್ಪು ನೆನೆದು ಈಗಲೂ ಕಣ್ಣೀರಾಗುತ್ತಿದ್ದಾರೆ.
ಸಂಪ್ರದಾಯದ ಪ್ರಕಾರ ಅಪ್ಪುಗೆ ಹಾಲು-ತುಪ್ಪ ಬಿಡಲೇಬೇಕಾಗಿತ್ತು. ನೋವಿನಲ್ಲೂ ದೊಡ್ಮನೆ ಮಕ್ಕಳು ಆಚಾರ-ವಿಚಾರ ಬದಿಗೊತ್ತಿಲ್ಲ. ಮನಸ್ಸಲ್ಲೇ ಎಷ್ಟೇ ದುಃಖವಿದ್ದರೂ ಮನದಲ್ಲೇ ಅದುಮಿಕೊಂಡು ಅಭಿಮಾನಿಗಳು ನೋವಾಗದಂತೆ ನಡೆದುಕೊಂಡಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅರಮನೆ ಹೂಗಳಿಂದ ಸಿಂಗಾರಗೊಂಡಿತ್ತು. ಆ ದೇವಾಲಯ ನೋಡಿ ಮತ್ತೆ ಅಭಿಮಾನಿಗಳು ಮನಸ್ಸು ವಿಲ ವಿಲ ಅಂತ ಒದ್ದಾಡಿದೆ. ಅಪ್ಪು ಅಲ್ಲಿ ಮಲಗಿದ್ದಾರಾ.? ಈಗಲೂ ಯಾವುದೋ ಶೂಟಿಂಗ್, ಕನಸು ಎಂಬಂತೆಯೇ ಭಾಸವಾಗುತ್ತಿದೆ. ಕುಟುಂಬಸ್ಥರೆಲ್ಲಾ ಸಮಾಧಿ ಬಳಿ ಬಂದು ಹಾಲು-ತುಪ್ಪ ಬಿಡುವ ಕಾರ್ಯ ಮುಗಿಸಿದ್ದಾರೆ.
ಪುನೀತ್ ಅವರ ಮಾವ ಗೋವಿಂದ ರಾಜು ಮುಂದಾಳತ್ವದಲ್ಲಿ ಹಾಲು ತುಪ್ಪ ಬಿಟ್ಟಿದ್ದಾರೆ. ಇಡೀ ಕುಟುಂಬ ಸದಸ್ಯರು ಹಾಗೂ ಚಿತ್ರರಂಗದ ಹಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪತ್ನಿ ಅಶ್ವಿನಿ ಹಾಗೂ ಮಕ್ಕಳು ಹಾಲು ತುಪ್ಪ ಬಿಟ್ಟರು.
ಸರ್ಕಾರ ಕೂಡ ಅಣ್ಣಾವ್ರ ಕುಟುಂಬದ ಜೊತೆ ನಿಂತಿದೆ. ಮೂರೂ ಸರ್ಕಾರಿ ಬಸ್ ನಲ್ಲೇ ಅಣ್ಣಾವ್ರ ಕುಟುಂಬ ಪುನೀತ್ ನಿವಾಸದಿಂದ ಕಂಠೀರವ ಸ್ಟುಡಿಯೋ ಕಡೆ ಬಂದಿತ್ತು. ಶ್ರೀಮುರುಳಿ ಹಾಗೂ ವಿಜಯ್ ರಾಘವೇಂದ್ರ ಕೂಡ ಕುಟುಂಬದವರ ಜೊತೆಯಲ್ಲೇ ಇದ್ದರು.