ಇಂದಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಏನಾದರೂ ಕೆಲಸ ಮಾಡುತ್ತಲೇ ಇರಬೇಕು. ನಾವು ಪ್ರತಿ ಕಾರ್ಯಕ್ಕೂ ಸಮಯವನ್ನು ನಿಗದಿಪಡಿಸಿರುತ್ತೇವೆ.
ಒಲೆಯ ಮೇಲೆ ಹಾಲನ್ನು ಕಾಯಿಸಲು ಇಟ್ಟು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುತ್ತೇವೆ. ಅಂತಹ ಸಂದರ್ಭದಲ್ಲಿ ಹಾಲು ಉಕ್ಕಿ ಗ್ಯಾಸ್ ಸ್ಟೌವ್ ಮೇಲೆ ಕಲೆಗಳು ಆಗುತ್ತವೆ. ಮತ್ತು ಹಾಲು ಕೂಡ ಚೆಲ್ಲುತ್ತವೆ. ಇದನ್ನು ತಪ್ಪಿಸಲು, ಕೆಲವು ಸಲಹೆಗಳನ್ನು ಅನುಸರಿಸಬಹುದು.
ದೊಡ್ಡ ಬಟ್ಟಲಿನಲ್ಲಿ ಹಾಲನ್ನು ಕುದಿಸುವುದು ಉತ್ತಮ. ಇದರಿಂದಾಗಿ ಹಾಲು ಉಕ್ಕುವ ಸಾಧ್ಯತೆ ಕಡಿಮೆ. ಇಲ್ಲವಾದರೆ ಚಿಕ್ಕ ಬಟ್ಟಲಿನಲ್ಲಿ ಕುದಿಸಿದರೆ ಬೇಗ ಕುದಿಯುತ್ತದೆ. ಅದಕ್ಕೇ ಮೊದಲು ದೊಡ್ಡ ಪಾತ್ರೆ ತೆಗೆದುಕೊಂಡು ಕುದಿಸಿದರೆ ಉತ್ತಮ. ಇದರಿಂದ ಹಾಲು ಕೂಡ ಚೆನ್ನಾಗಿ ಕುದಿಯುತ್ತದೆ.
ಹಾಲು ಕುದಿಯುತ್ತಿರುವಾಗ ಯಾವುದಾದರೂ ಮರದ ಚಮಚವನ್ನು ಪಾತ್ರೆಯ ಮೇಲೆ ಇರಿಸಿ. ಇದರಿಂದಾಗಿ ಹಾಲು ಉಕ್ಕುವುದಿಲ್ಲ. ಹಾಗೇನಾದರೂ ಹಾಲು ಉಕ್ಕಿದರೂ ಚಮಚ ಮುಟ್ಟಿ ಕೆಳಗೆ ಹೋಗುತ್ತದೆ.
ಕುದಿಯುವ ಹಾಲಿನ ಬಟ್ಟಲಿಗೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿರಿ. ಇದು ಹಾಲು ಉಕ್ಕುವುದನ್ನು ತಡೆಯುತ್ತದೆ ಮತ್ತು ಹಾಲು ಚೆನ್ನಾಗಿ ಕಾಯುತ್ತವೆ. ಬೆಣ್ಣೆಯನ್ನು ಹೆಚ್ಚು ಹಚ್ಚಬಾರದು. ಇದರಿಂದ ಹಾಲಿನ ರುಚಿ ಬದಲಾಗುತ್ತದೆ ಮತ್ತು ಒಡೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಸ್ವಲ್ಪ ಮಾತ್ರ ಬೆಣ್ಣೆ ಹಚ್ಚಬೇಕು.
ಅಂತೆಯೇ, ಹಾಲು ನೊರೆ ಬಂದಾಗ ಸ್ವಲ್ಪ ನೀರು ಚಿಮುಕಿಸಿ. ಈ ರೀತಿ ಮಾಡುವುದರಿಂದ ಹಾಲು ಉಕ್ಕುವುದಿಲ್ಲ. ಅದೇ ರೀತಿಯಲ್ಲಿ, ಹಾಲು ಉಕ್ಕಿದಾಗ ಒಂದು ಚಮಚದೊಂದಿಗೆ ಹಾಲನ್ನು ಕಲುಕಿರಿ. ಬಟ್ಟಲನ್ನು ಎತ್ತಿ ತಿರುಗಿಸುವುದರಿಂದ ಹಾಲು ಉಕ್ಕುವುದನ್ನು ತಡೆಯಬಹುದು.