ವಿಜಯನಗರ: ಮೈಲಾರ ಕಾರ್ಣಿಕವೆಂದರೆ ಅದೊಂದು ಗಟ್ಟಿ ನಂಬಿಕೆ. ಈಗಾಗಲೇ ಕಾರ್ಣಿಕ ಹೇಳಿದ ಭವಿಷ್ಯವು ಸತ್ಯವಾಗಿದೆ. ಹೀಗಾಗಿ ಕಾರ್ಣಿಕ ನುಡಿಯುವ ವರ್ಷದ ಭವಿಷ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತೆ.
ಜಿಲ್ಲೆಯ ಹೂವಿನಡಗಲಿ ತಾಲೂಕಿನ ಮೈಲಾರದಲ್ಲಿ ಮೈಲಾರ ಕಾರ್ಣಿಕ ನಡೆದಿದೆ. ಇದನ್ನು ದೈವವಾಣಿ ಎಂದೇ ಭಕ್ತರು ನಂಬುತ್ತಾರೆ. ಈ ಬಾರಿಯ ಭವಿಷ್ಯದ ವಾಣಿಯಲ್ಲಿ ಮಳೆ ಬೆಳೆ ಸಂಪನ್ನವಾಗುತ್ತೆ ಎಂದೇ ಕಾರ್ಣಿಕ ಭವಿಷ್ಯ ನುಡಿದ್ದಾರೆ.
ಕಳೆದ ಎರಡು ವರ್ಷದಿಂದ ಕೊರೊನಾ ಸಂಕಷ್ಟವನ್ನ ಅನುಭವಿಸಿದ್ದೆವು. ಮಧ್ಯೆ ರೈತರಿಗೂ ಬೆಳೆ ನಾಶ, ನಷ್ಟವಾಗಿತ್ತು. ಪ್ರಸಕ್ತ ವರ್ಷದಲ್ಲಿ ಮಳೆ ಬೆಳೆ ಸಂಪನ್ನವಾಗುತ್ತೆ, ರೈತ ಸಂಪನ್ನನಾಗುತ್ತಾನೆಂದು ಭವಿಷ್ಯ ನುಡಿದಿದೆ.
ರಾಮಪ್ಪ ಗೊರವಯ್ಯ ಅವರು 15 ಅಡಿ ಬಿಲ್ಲನ್ನೇರಿ ವರ್ಷದ ಭವಿಷ್ಯ ನುಡಿದಿದ್ದಾರೆ. ಮಳೆ ಬೆಳೆ ಸಂಪಾಯಿತಲೆ ಪರಾಕ್ ಎಂದು ಭವಿಷ್ಯದ ಸಾಲುಗಳನ್ನ ಹೇಳಿದ್ದು, ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆ ಸಾಲುಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಕಾರ್ಣಿಕದ ಭವಿಷ್ಯ ಕೇಳಿ ರೈತರ ಮೊಗದಲ್ಲಿ ಸಂತಸ ಉಕ್ಕಿ ಹರಿದಿದೆ.