ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, (ಸೆ.19) : ಬೆಂಗಳೂರು ನಗರದ ಪೀಣ್ಯದಿಂದ ಶಿರಡಿಯವರೆಗೂ ರೋಟರಿ ಸಂಸ್ಥೆಯ ಕೆಲ ಪದಾಧಿಕಾರಿಗಳು ಬೈಕ್ ಮೂಲಕ ಪ್ರವಾಸವನ್ನು ಮಾಡುವುದರ ಮೂಲಕ ಮಾನವನಿಗೆ ದೈಹಿಕ ಸಾಮರ್ಥ ಎಷ್ಟರ ಮಟ್ಟಿಗೆ ಅವಶ್ಯಕತೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕೆಂಬ ಸಂದೇಶವನ್ನು ಸಾರುತ್ತಾ ಹೊರಟ್ಟಿದ್ದಾರೆ.
ಇಂದು ಬೆಳಿಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಬೆಂಗಳೂರಿನಿಂದ ಬೈಕ್ ಮೂಲಕ ಆಗಮಿಸಿದ ರೋಟರಿ ಕ್ಲಬ್‍ನ ಪದಾಧಿಕಾರಿಗಳನ್ನು ಚಿತ್ರದುರ್ಗ ರೋಟರಿ ಕ್ಲಬ್, ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ಸಂಸ್ಥೆಯ ಪದಾಧಿಕಾರಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಮುಖ್ಯಸ್ಥರಾದ ರಾಜೇಶ್, ಮಾನಸಿಕ ಆರೋಗ್ಯ ಎಲ್ಲಾ ವಯಸ್ಸಿನವರಿಗೂ ಅಗತ್ಯವಾಗಿದೆ. ಆದರೆ ಇತ್ತೀಚಿನ ದಿನಮಾನದಲ್ಲಿ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡುತ್ತಾರೆ ಆದರೆ ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರ ಬಗ್ಗೆ ಅರಿವನ್ನು ನೀಡುವುದಕ್ಕೆ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.
ಈ ವರ್ಷ ರೋಟರಿ ಮುಖ್ಯ ಉದ್ದೇಶ ಮಾನಸಿಕ ಆರೋಗ್ಯದ ಸ್ಥಿರತೆ ಎಂಬುದಾಗಿದೆ. ಇಂದು ಬೆಳಿಗ್ಗೆಯಿಂದ ಪ್ರವಾಸವನ್ನು ಪ್ರಾರಂಭ ಮಾಡಿದ್ದು ಇದು ಈ ತಿಂಗಳ 30ಕ್ಕೆ ಅಂತ್ಯವಾಗಲಿದೆ. ಶಿರಡಿಯನ್ನು ಸೆ.22ರಂದು ತಲುಪಿಲಿದ್ದೇವೆ. ದಿನಕ್ಕೆ 300 ರಿಂದ 350 ಕಿ.ಮೀ. ದೂರವನ್ನು ಕ್ರಮಿಸಲಿದ್ದೇವೆ ಒಟ್ಟು 12 ದಿನದ ಪ್ರವಾಸ ಇದಾಗಿದೆ ಎಂದರು.
ದಿನ ಒಂದಕ್ಕೆ 4 ಕಡೆಗಳಲ್ಲಿ ಸಭೆಯನ್ನು ಮಾಡುವುದರ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಇತರರಿಗೆ ಅರಿವನ್ನು ಮೂಡಿಸಲಾಗುವುದು. ಈ ತಂಡದಲ್ಲಿ 8 ಜನರಿದ್ದು, ಡಿ.3192 ಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮಕ್ಕಳಲ್ಲಿ, ಯುವ ಜನಾಂಗ, ಹಿರಿಯ ನಾಗರೀಕರಿಗೆ ಈ ಕಾರ್ಯಕ್ರಮವನ್ನು ತಿಳಿಸಲಾಗುವುದು. ಮನಸ್ಥಿತಿಯವರನ್ನು ನೋಡಿಕೊಳ್ಳುವವರನ್ನು ನೋಡಿಕೊಳ್ಳುವವರ ಮನಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ತಂಡದಲ್ಲಿ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ವಿನೋದ್ ಆಗ್ರವಾಲ್, ಜಂಟಿ ಕಾರ್ಯದರ್ಶಿ ನವೀನ್, ಶ್ರೀಕಾಂತ್, ಶ್ರೀನಿವಾಸ್ ರಾಜು,ಜಯಪ್ರಕಾಶ್, ಮಹಮದ್ ಖಾನ್ ಮತ್ತು ಮೋಹನ್ ಭಾಗವಹಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅದ್ಯಕ್ಷ ಕನಕರಾಜು, ಎಸ್.ವೀರೇಶ್, ಗೀರೀಶ್, ವೀರಭದ್ರಸ್ವಾಮಿ, ಕುರುಬರ ಹಳ್ಳಿ ಶಿವಣ್ಣ, ಸೂರ್ಯ ನಾರಾಯಣ, ಶಶಿಧರ್, ಗೀರೀಶ್, ಮೋಹನ್ ಬಿ.ಎಸ್. ಶಂಕ್ರರಪ್ಪ, ವೀರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.