Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಇವರ ವ್ಯಕ್ತಿತ್ವ ಸ್ವಾಭಿಮಾನದ ಸಂಕೇತ : ಚಕ್ರವರ್ತಿ ಸೂಲಿಬೆಲಿ

Facebook
Twitter
Telegram
WhatsApp

ಚಿತ್ರದುರ್ಗ, (ಅ.03) : ಮಹಾತ್ಮಗಾಂಧಿಜೀ ಹುಟ್ಟಿದ ದಿವಸ, ಇನ್ನೊಂದು ಲಾಲ್ ಬಹದ್ದೂರ್‌ ಶಾಸ್ತ್ರಿ ಹುಟ್ಟಿದ ದಿವಸ, ಇಬ್ಬರ ವ್ಯಕ್ತಿತ್ವವನ್ನು ಒಂದೇ ಪದದಲ್ಲಿ ಹೇಳಬಹುದು ಎಂದರೆ ಸ್ವಾಭಿಮಾನ ಎಂದು ಚಕ್ರವರ್ತಿ ಸೂಲಿಬೆಲಿ ತಿಳಿಸಿದರು.

ನಗರದ ಹೊರವಲಯದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿಗುರುಪೀಠ ಹಾಗೂ ಯುವ ಬ್ರಿಗೇಡ್ ಆಯೋಸಿದ್ದ ಗಾಂಧಿ ಶಾಸ್ತ್ರಿ ಕುರಿತ ಚಿಂತನಗಳ ಔತಣಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿಜೀ ನಿರ್ಮಾಣಗೊಂಡಿದ್ದು, ಮೋಹನದಾಸ ಕರಮಚಂದ್ರ ಗಾಂಧಿ ಎನ್ನುವಂತಹ ವೇರಿ ಆರ್ಡಿನರಿ ವ್ಯಕ್ತಿ. ಅಧ್ಯಯನದಲ್ಲಿ ಮುಂದಿರಲಿಲ್ಲ. ಅವರು ಎಲ್.ಎಲ್.ಬಿ. ಮುಗಿಸಿ ಕೋರ್ಟ್ಗೆ ಹೋಗಿ ನಿಂತುಕೊಂಡಾಗ ಜಡ್ಜ್ ನೋಡಿ ನಡುಗಿ ಓಡಿಬಂದುಬಿಟ್ಟರು.  ಅವರು ವಾದಮಾಡಲಿಕ್ಕೆ ಆಗಲಿಲ್ಲ. ಜೀವನದಲ್ಲಿ ಪ್ರತಿಭಾರಿ ಸೋಲನ್ನೇ ಅನುಭವಿಸಿದರು. ಅವರು ಒಂದೇ ಒಂದು ಬಾರಿ ಗೆದಿದ್ದು ಯಾವಾಗ ಎಂದರೆ ಸ್ವಾಭಿಮಾನದಿಂದ ಸೆಟೆದು ನಿಂತಾಗಮಾತ್ರ.

ಯಾವಾಗ ಅವರನ್ನು ಸೌತ್‌ಆಫ್ರಿಕಾದಲ್ಲಿ ಅವರು ಕೂತಿದ್ದ ಟ್ರೈನ್ ನಿಂದ ಆಚೆ ದಬ್ಬಿದ್ರೋ, ಅವರನ್ನು ಆಚೆ ದಬ್ಬಿ ಅವರನ್ನು ಅಮಾನಿಸಿದಾಗ ಆ ಅವಮಾನಕ್ಕೆ ಪ್ರತಿಕಾರವಾಗಿ ಹೋರಾಟಮಾಡಲಿಲ್ಲ. ಆದರೆ ತನ್ನ ಒಳಗಿನ ಸ್ವಾಭಿಮಾನವನ್ನು ಜಾಗೃತಗೊಳಿಸಿಕೊಂಡು ತನ್ನತ್ತ ಇತರರನ್ನು ಕೂಡಿಸಿಕೊಂಡು ಅದಕ್ಕೊಂದು ಸಾತ್ವಿಕವಾದ ರೂಪವನ್ನು ಕೊಟ್ಟರು. ಸಾಮಾನ್ಯವಾದ ಮೋಹನ್‌ದಾಸ್ ಕರಮಚಂದ್ರಗಾಂಧಿ ಮಹಾತ್ಮಗಾಂಧಿಜೀಯಾದರು.

ಯಾಕೆ ನಿರ್ಮಾಣಗೊಂಡರು ಎಂದರೆ ಸ್ವಾಭಿಮಾನ ಜಾಗೃತವಾದ ಕಾರಣ. ಅದೇ ತರಹದ ಸ್ವಾಭಿಮಾನದ ಮತ್ತೊಂದು ಮೂರ್ತಿ ಲಾಲ್‌ಬಹದ್ದೂರ್ ಶಾಸ್ತ್ರಿ ಹೇಗಿದ್ದರೂ ಅವರು ಎಂದರೆ ಜವಹಾರ್‌ಲಾಲ್‌ರವರು ಮರಣ ಹೊಂದಿದ ನಂತರ ಈ ದೇಶದಲ್ಲಿ ಅಲ್ಲ ಜಗತ್ತಿಗೆಲ್ಲಾ ಒಂದು ದೊಡ್ಡ ಪ್ರೆಶ್ನೆ ಇತ್ತು. ಭಾರತದಲ್ಲಿ ಯಾರಿಗೆ ಜವಹಾರ್‌ಲಾಲ್ ನೆಹರು ತರ ಆಡಳಿತ ನಡೆಸುತ್ತಾರೆ ಎಂಬ ಪ್ರಶ್ನೆ ಕಾಡುತ್ತಿತ್ತು.

ಜವಹಾರ್‌ಲಾಲ್ ನೆಹರು ಅವರು ಯಾವ ರೀತಿ ಆಡಳಿತ ನಡೆಸುತ್ತಿದ್ದರು ಎಂದರೆ ನನ್ನ ನಂತರ ಯಾರು ಈ ರೀತಿ ಆಡಳಿತ ನಡೆಸುವುದಿಲ್ಲ ಎಂಬ ರೀತಿ ರೂಪಿಸಿಬಿಟ್ಟಿದ್ದರು. ಆದರೆ ನಂತರದಲ್ಲಿ ಬಂದAತಹ ಶಾಸ್ತಿçಯವರು ಉತ್ತಮ ಆಡಳಿತ ನಡೆಸಿ ಮೆಚ್ಚುಗೆ ಪಡೆದುಕೊಂಡಿದ್ದರು.

ಪ್ರಾಪಂಚಿಕರ ತೃಪ್ತಿಪಡಿಸುವುದು ಬಹಳ ಸುಲಭ, ಟಿ.ವಿ. ಸೇರಿದಂತೆ ಇತ್ಯಾದಿಗಳನ್ನು ಕೊಡುವ ಮೂಲಕ ತೃಪ್ತಿಪಡಿಸಬಹುದು. ಸ್ವಾಮೀಜಿಗಳ ಆಸೆ ತೀರಿಸುವುದು ಸುಲಭವಲ್ಲ. ಟಿ.ವಿ. ಸೋಪ ಕೊಟ್ಟರೆ ತೀರುವುದಿಲ್ಲ. ಯಾವುದರಲ್ಲಿ ಸಮಾಧಾನವಾಗುತ್ತೆ. ಭಗವಂತನ ಸೃಷ್ಟಿಯನ್ನು ಇನ್ನೂ ಚಂದಗೊಳಿಸುವ ಮೂಲಕ ಆ ಸಂತರಿಗೆ ಸಮಾಧಾನ ಆಗಬಹುದು, ತೃಪ್ತಿಯಾಗಬಹುದು. ಆ ತೃಪ್ತಿಯನ್ನು ನಾವು ಇನ್ನು ಹೆಚ್ಚಿನ ಕೆಲಸ ಮಾಡುತ್ತೇವೆಂದು ಸಂಕಲ್ಪ ಮಾಡುವ ಮೂಲಕ ತೀರಿಸುವುದು. ತಿಂದ ಪ್ರತಿಯೊಂದು ಅನ್ನವು ಜೀರ್ಣವಾಗುವುದು ಆಗಲೇ, ಇಲ್ಲದೇ ಹೋದರೆ ಅನ್ನ ಋಣಶೇಷವಾಗಿ ಹೊಟ್ಟೆಯಲ್ಲಿ ಜೀರ್ಣವಾಗದೇ ಕೊಳತನೆ ಇರುತ್ತದೆ ಹಾಗಾಗಿ ಮಾಡಿದ  ಸಂಕಲ್ಪ ಈಡೇರಿಸಬೇಕೆಂದು ಎಚ್ಚರಿಸಿದರು.

ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಯುವಕರಿಗೆ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಉದ್ಯೋಗ ಸೃಷ್ಠಿಸುವ ಶಿಕ್ಷಣ ನೀಡಿದರೆ ಯುವಕರೇ ಉದ್ಯೋಗಿಗಳಾಗುತ್ತಾರೆ. ಈಗಿರುವ ಸಂದರ್ಭದಲ್ಲಿ ಸ್ವ-ಉದ್ಯೋಗವನ್ನು ಸೃಷ್ಠಿಸಿಕೊಳ್ಳದೇ ಯುವಕರು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಅಪಾಯಕ್ಕೀಡುಮಾಡುವ ಸ್ಥಿತಿಯು ನಿರ್ಮಾಣಮಾಡ ಬಹುದೆಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಬಸವಕುಮಾರ ಸ್ವಾಮೀಜಿ, ಡಾ.ಬಸವಮಾಚಿದೇವ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿದರು.

ಭೋವಿಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಸ್ವಾಗತಿಸಿ ನಿರೂಪಿಸಿದರು. ಯುವ ಬ್ರಿಗೇಡ್‌ನ ನೂರಾರು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ..!

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಇಂದು ಮತ ಎಣಿಕೆ ಕಾರ್ಯದಲ್ಲಿ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಮುಂದಿದೆ. ಸಿಪಿ ಯೋಗೀಶ್ವರ್ : 45,982

ಸಿಪಿ ಯೋಗೀಶ್ವರ್ ವರ್ಸಸ್ ನಿಖಿಲ್ ಕುಮಾರಸ್ವಾಮಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮುನ್ನಡೆ ..!

ಚನ್ನಪಟ್ಟಣ: ರಾಜ್ಯದಲ್ಲಿ ಇಂದು ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆಯಿಂದಾನೇ ನಡೆಯುತ್ತಿದೆ. ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಎಲ್ಲರ ಚಿತ್ತ ಇಂದು ಅತ್ತ ಕಡೆಯೇ ನೆಟ್ಟಿದೆ‌. ಮತ ಎಣಿಕೆ ನಡೆಯುತ್ತಿದ್ದು, ಸದ್ಯದ

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

error: Content is protected !!