ಬೆಂಗಳೂರು: ಈ ಪ್ರೀತಿ ಅನ್ನೋ ಹುಚ್ಚಾಟ ಕೆಲವೊಮ್ಮೆ ಪ್ರಾಣವನ್ನೇ ತೆಗೆದು ಬಿಡುತ್ತೆ. ಅಂಥದ್ದೇ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಹಾಗಂತ ಆ ಹುಡುಗಿ ಪ್ರೀತಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಹುಡುಗನ ಹುಚ್ಚಾಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರೋದು.
25 ವರ್ಷದ ಸಾಕ್ಷಿ ಎಂಬ ಯುವತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರಯಣ್ ಎಂಬಾತನ ಹುಚ್ಚಾಟಕ್ಕೆ ಒಂದು ಹುಡುಗಿಯ ಪ್ರಾಣವೇ ಹೋಗಿದೆ.
ಅರುಣ್ ಎಂಬಾತ ಸಾಕ್ಷಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಮದುವೆ ಮಾಡಿಕೋ ಅಂತ ಹೆದರಿಸುತ್ತಿದ್ದನಂತೆ. ಸ್ನೇಹಿತ ಗೋಪಾಲ್ ಎಂಬಾತನ ಜೊತೆ ಸೇರಿ, ಹುಡುಗಿಯ ಮಾವನಿಗೆ ಪೊಲೀಸರ ಹೆಸರಲ್ಲಿ ಕರೆಯನ್ನು ಮಾಡಿದ್ದರಂತೆ. ಅರುಣ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ನಿಮ್ಮ ಹುಡುಗಿ ಮದುವೆಯಾಗಲಿಲ್ಲವೆಂದರೆ ಸಾಯೋದಾಗಿ ಹೇಳುತ್ತಿದ್ದಾನೆ. ಹೀಗಾಗಿ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದ್ದನಂತೆ.
ಈ ವಿಷಯ ತಿಳಿದ ಯುವತಿ ಭಯಗೊಂಡಿದ್ದಾಳೆ. ಇದರಿಂದಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಯುವತಿಯ ಪೋಷಕರು ಹೇಳಿದ್ದಾರೆ. ಸದ್ಯ ಗೋಪಾಲ್ ಹಾಗೂ ಅರುಣ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಒನ್ : ಬೆಳಿಗ್ಗೆ ಬೆಂಡೆಕಾಯಿ-ನಿಂಬೆ ರಸ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬೆಂಡೆಕಾಯಿಯಲ್ಲಿರುವ ಫೈಬರ್, ನಿಂಬೆ ರಸದಲ್ಲಿರುವ ವಿಟಮಿನ್ ಸಿ…
ಈ ರಾಶಿಯ ಇಷ್ಟಪಟ್ಟವರ ಮನಸ್ಸು ಚಂಚಲ ಈ ರಾಶಿಯವರು ಎಷ್ಟೇ ಮನೆ ಬದಲಾಯಿಸಿದರು ಅದೃಷ್ಟ ಕೈಹಿಡಿಯಲಿಲ್ಲ , ಸೋಮವಾರದ ರಾಶಿ…
ಸುದ್ದಿಒನ್ ಮಹಾ ಕುಂಭ ಮೇಳದಿಂದ ಪ್ರಸಿದ್ಧರಾದ ಐಐಟಿ ಬಾಬಾ ಈಗ ಇಂಟರ್ನೆಟ್ ಸೆನ್ಸೇಶನ್. ಅವರ ಸಂದರ್ಶನಗಳು ಮತ್ತು ಪಾಡ್‌ಕಾಸ್ಟ್‌ಗಳ…
ಸುದ್ದಿಒನ್ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು. ಇದರೊಂದಿಗೆ, ತಂಡವು 2017…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…