ಬೆಂಗಳೂರು: ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ನೆಲಮಂಗಲದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಕಟ್ಟಿಸಿದ್ದಾರೆ. ಈ ಹಿಂದೆ ಪುಟ್ಟದೊಂದು ಆಸ್ಪತ್ರೆ ಕಟ್ಟಿಸಿದ್ದರು. ಇದೀಗ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಕಟ್ಟಿಸಿದ್ದು, ಅದರ ಉದ್ಘಾಟನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ.
ಸಿಎಂ ಕಚೇರಿಯಲ್ಲಿ ನಿನ್ನೆ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವ ವಿನೋದ್ ಹಾಗೂ ಲೀಲಾವತಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಬಗ್ಗೆ ಹೇಳಿದ್ದಾರೆ. ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಇದನ್ನು ಕೇಳಿ ಸಿಎಂ ಅಕ್ಷರಶಃ ಖುಷಿ ಪಟ್ಟಿದ್ದಾರೆ. ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಯಾಕೆಂದರೆ ಈ ಆಸ್ಪತ್ರೆಯನ್ನು ಲೀಲಾವತಿಯಾಗಲಿ, ವಿನೋದ್ ಆಗಲಿ ತಮ್ಮ ಹೆಸರಿನಲ್ಲಿಯೇ ಮುಂದುವರೆಸುವುದಿಲ್ಲ. ಉದ್ಘಾಟನೆಯಾದ ಬಳಿಕ ಸರ್ಕಾರಕ್ಕೆ ಬಿಟ್ಟು ಕೊಡಲಿದ್ದಾರೆ.
ಇನ್ನು ಚೆನ್ನೈನಲ್ಲಿದ್ದ ಜಮೀನು ಮಾರಿ ಅದರಿಂದ ಬಂದ ಹಣದಿಂದ ಈ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಹೀಗಾಗಿ ಆಸ್ಪತ್ರೆ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಅವರನ್ನು ಆಹ್ವಾನ ಮಾಡಿದ್ದಾರೆ. ಲೀಲಾವತಿ ಅವರ ಇಷ್ಟು ಮಹತ್ವದ ಕಾರ್ಯಕ್ಕೆ ಸೋಲದೇವನಹಳ್ಳಿ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.