ಒಂದ್ಕಡೆ ಕೊರೊನಾ ಭಯ..ಮತ್ತೊಂದ್ಕಡೆ 50% ಪ್ರೇಕ್ಷಕರಿಗಷ್ಟೇ ಅನುಮತಿ..ಜನ ಮನೆಯಿಂದ ಹೊರ ಬರ್ತಾರಾ ಅನ್ನೋ ದುಗುಡ ದುಮ್ಮಾನದಲ್ಲೇ ರಿಲೀಸ್ ಆದ ಸಿನಿಮಾ ‘ಲಂಕೆ’. ಲೂಸ್ ಮಾದ ಯೋಗೀಶ್ ಅಭಿನಯ ಈ ಎಲ್ಲಾ ಭಯಗಳಿಗೂ ಬ್ರೇಕ್ ಹಾಕಿದೆ. ಪ್ರೇಕ್ಷಕರನ್ನ ಥಿಯೇಟರ್ ಎಡೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಎಸ್, ‘ಲಂಕೆ’ ಸಿನಿಮಾ ಯಶಸ್ವಿ 25 ದಿನಗಳನ್ನ ಪೂರೈಸಿ, ಅದೇ ಖುಷಿಯಲ್ಲಿ ಮುನ್ನುಗ್ಗುತ್ತಿದೆ.
ಕಳೆದ ಒಂದೂವರೆ ವರ್ಷದಿಂದ ಸಕ್ಸಸ್ ಫುಲ್ಲಿ 25 ದಿನ ಓಡಿದೆ ಅನ್ನೋ ಮಾತನ್ನ ಕೇಳೋದೇ ಕಡಿಮೆ ಆಗಿತ್ತು. ಯಾಕಂದ್ರೆ ಪ್ರತಿ ವಾರ ಅಷ್ಟು ಸಿನಿಮಾಗಳು ರಿಲೀಸ್ ಆಗ್ತಾ ಇತ್ತು. ಥಿಯೇಟರ್ ನಲ್ಲಿ ರಿಲೀಸ್ ಆದ ಸಿನಿಮಾಗಳು ಉಳಿಯೋದೆ ಕಷ್ಟವಾಗ್ತಾ ಇತ್ತು. ಇದೀಗ ಬಹಳ ದಿನಗಳ ನಂತರ 25 ದಿನಗಳ ಸಂಭ್ರಮದ ಕಳೆ ತಂದುಕೊಟ್ಟಿದೆ ‘ಲಂಕೆ’ ಸಿನಿಮಾ.
ಗಣೇಶ ಚತುರ್ಥಿಯ ದಿನ ಲೂಸ್ ಮಾದ ಯೋಗಿ ಉಘೆ ಉಘೆ ಅಂತ ‘ಲಂಕೆ’ಗೆ ಬಂದಿದ್ರು. ಲೂಸ್ ಮಾದ ಯೋಗಿಯ ಡಿಫ್ರೆಂಟ್ ಲುಕ್, ಮ್ಯಾನರಿಸಂ, ಆಕ್ಷನ್ ಸೀನ್ ಗಳಿಗೆ ಪ್ರೇಕ್ಷಕ ಪ್ರಭು ಫುಲ್ ಫಿದಾ ಆಗಿದ್ದಾನೆ. ಹೀಗಾಗಿ ಸಿನಿಮಾ ಗೆದ್ದಿದೆ. ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಈ ಬಗ್ಗೆ ಚಿತ್ರತಂಡ ಕೂಡ ತಮ್ಮ ಖುಷಿಯನ್ನ ಸುದ್ದಿಗೋಷ್ಠಿಯಲ್ಲಿ ಮನತುಂಬಿ ಹೊರ ಹಾಕಿದೆ.ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ವಿಶೇಷ ಗಮನ ಸೆಳೆಯುತ್ತಾರೆ. ದಶಕಗಳ ಹಿಂದೆ ನಡೆದ ನೈಜ ಘಟನೆಯ ಪಾತ್ರವೊಂದಕ್ಕೆ ವಿಜಯ್ ಜೀವ ತುಂಬಿದ್ದಾರೆ. ಅವರ ಪಾತ್ರ ಮನಸ್ಸಿಗೆ ನಾಟುವಂತಿದ್ರೆ, ಅವರಿಲ್ಲದಿರುವಿಕೆ ಪ್ರೇಕ್ಷಕನ ಮನಸ್ಸಿಗೆ ತೀರಾ ನೋವುಂಟು ಮಾಡಿದೆ.
ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ಸಿನಿಮಾ ನಿರ್ಮಿಸಿದ್ದಾರೆ. ರಾಮ್ ಪ್ರಸಾದ್ ನಿರ್ದೇಶನದವಿದ್ದು, ಕೃಷಿ ತಾಪಂಡ, ಕಾವ್ಯ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಲಂಕೆ’ ಚಿತ್ರ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. 50 ದಿನಗಳತ್ತ ಮುನ್ನುಗ್ಗುತ್ತಿರುವ ಕನ್ನಡದ ‘ಲಂಕೆ’ಗೆ ನಮ್ಮದು ಒಂದು ಆಲ್ ದಿ ಬೆಸ್ಟ್.