ಇತ್ತೀಚೆಗೆ ದುಡ್ ಮಾಡೋಕೆ ದೊಡ್ಡ ದೊಡ್ಡವರ ಹೆಸರೇಳಿಕೊಂಡು ಹಣ ಮಾಡೋ ಕಯಾಲಿ ಶುರುವಾಗಿದೆ. ರಾಜಕಾರಣಿಗಳ ಹೆಸರೇಳಿಕೊಂಡು ಹಣ ವಸೂಲಿ ಮಾಡೋದು ಅದೆಷ್ಟು ಜನವೋ. ಇದೀಗ ಅಂಥದ್ದೇ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಹೆಸರೇಳಿಕೊಂಡು ವಂಚಿಸುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಮಹಮ್ಮದ್ ರೆಹಮಾನ್, ಶಿವಮೊಗ್ಗದ ವಿಠಲ್ ರಾವ್, ಮಂಜುನಾಥ್, ಮಹ್ಮದ್ ಮುಸಾಫೀರ್ ಹಾಗೂ ಖಾಜಿವಾಲೀಸ್ ವಂಚನೆ ಮಾಡುತ್ತಿದ್ದ ಆರೋಪಿಗಳು ಎಂದು ಗುರುತಿಸಲಾಗಿದೆ.
ವಿಲ್ಲಾ ಪ್ರಾಜೆಕ್ಟ್, ಆರ್ ಓ ಪ್ರಾಜೆಕ್ಟ್ ಕೊಡ್ತೀವಿ ಅಂತೇಳಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾಗರದ ಲಕ್ಷ್ಮಣ್ ಎಂಬುವವರಿಗೆ 100 ಕೋಟಿಯ ವಿಲ್ಲಾ ಪ್ರಾಜೆಕ್ಟ್ ಕೊಡಿಸುವುದಾಗಿ ಹಾಗೂ ರಾಜೇಶ್ ಗೆ ಆರ್ ಒ ಪ್ರಾಜೆಕ್ಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜೇಶ್ ಗೆ 10 ಲಕ್ಷ ಹಾಗೂ ಲಕ್ಷ್ಮಣ್ ಗೆ 26.25 ಲಕ್ಷ ವಂಚನೆ ಮಾಡಲಾಗಿದೆ. ರಾಜೇಶ್ ಮತ್ತು ಲಕ್ಷ್ಮಣ್ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡು, ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.