ಕೋತಿರಾಜನ ಹೊಸ ಸಾಹಸ ; ಬಂಟ್ವಾಳದ ಈ ಬೆಟ್ಟ ಹತ್ತಲಿದ್ದಾರೆ ನಾಳೆ..!

ಕೋತಿರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿತ್ರದುರ್ಗ ಮೂಲದವರು. ಜ್ಯೋತಿರಾಜ್ ಮೂಲ ಹೆಸರಾದರೂ ಮಾಡುವ ಸಾಹಸಗಳಿಂದ ಕೋತಿರಾಜ್ ಎಂದೇ ಖ್ಯಾತಿ ಪಡೆದಿದ್ದಾರೆ. ಇದೀಗ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವುದಕ್ಕೆ ಮುಂದಾಗಿದ್ದಾರೆ.

ನಾಳೆಯೇ ಕಾರಿಂಜೇಶ್ವರ ಬೆಟ್ಟವನ್ನು ಏರಲಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿದೆ. ಮೊದಲ ಬಾರಿಗೆ ಬಂಟ್ವಾಳದತ್ತ ಕೋತಿರಾಜ್ ಪಯಣ ಬೆಳೆಸಿದ್ದಾರೆ. ಈ ಕೋತಿರಾಜ್ ಅವರನ್ನು ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯುತ್ತಾರೆ. ಈಗ ಕಾರಿಂಜೇಶ್ವರ ಬೆಟ್ಟವನ್ನು ಏರಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕೋತಿರಾಜ್ ಸಾಹಸ ಮಾತ್ರವಲ್ಲ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಬಡವರ ಕಲ್ಯಾಣಕ್ಕಾಗಿ ತಮ್ಮದೇ ಆದ ಟ್ರಸ್ಟ್ ಅನ್ನು ಮಾಡಿದ್ದಾರೆ. ಈ ಟ್ರಸ್ಟ್ ಮೂಲಕ ಬಡವರಿಗೆ ಅಗತ್ಯವಿರುವ ಸಹಾಯವನ್ನು ಮಾಡುತ್ತಾ ಇರುತ್ತಾರೆ. ಅದಕ್ಕೆ ಹಣ ಹೊಂದಿಸಲು ಈ ರೀತಿಯ ಸಾಹಸಕ್ಕೂ ಕೈ ಹಾಕುತ್ತಾರೆ.

ನಾಳೆ ಭಾನುವಾರ ಕಾರಿಂಜೇಶ್ವರ ಬೆಟ್ಟವನ್ನು ಕೋತಿರಾಜ್ ಹತ್ತಲಿದ್ದಾರೆ. ಈ ಸಂಬಂಧ ದೇವಸ್ಥಾನ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಅಧಿಜೃತವಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಹಾಗೇ ಬಂಟ್ವಾಳ ಜನತೆಯ ಸಹಾಯವನ್ನು ಕೇಳಿದ್ದಾರೆ. ಇತ್ತೀಚೆಗಷ್ಟೇ ಕುಂದಾಪುರದ ಹನುಮಾನ್ ವಿಗ್ರಹ ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಭಿನ್ನ ಸಾಹಸದ ಮೂಲಕ ಜನಪ್ರಿಯರಾದ ಕೋತಿರಾಜ್ ತನ್ನ ಇಷ್ಟದೇವರಾದ 85 ಅಡಿ ಎತ್ತರದ ಹನುಮಂತನ ವಿಗ್ರಹದ ತುತ್ತ ತುದಿಗೆ ಏರಿ ಎಲ್ಲರನ್ನು ಚಕಿತರನ್ನಾಗಿ ಮಾಡಿದ್ದಾರೆ. ಈಗಾಗಲೇ ಬಹಳಷ್ಟು ಕಡೆ ಎತ್ತರದ ಕಟ್ಟಡಗಳನ್ನು ಏರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಿಂದೆಯೂ ಕೂಡ ಉಡುಪಿಯ ಅನೇಕ ಬಹು ಮಹಡಿ ಕಟ್ಟಡಗಳನ್ನು ಇವರು ಏರಿ ಸಾಹಸ ಮೆರೆದಿದ್ದರು.

suddionenews

Recent Posts

ಸತತವಾಗಿ ಇಳಿಕೆಯತ್ತ ಚಿನ್ನದ ದರ; ಇಂದಿನ ರೇಟ್ ಎಷ್ಟಿದೆ..?

ಬೆಂಗಳೂರು; ಕಳೆದ ಕೆಲವು ದಿನಗಳ ಹಿಂದಷ್ಟೇ ಚಿನ್ನದ ಬೆಲೆ ಏರಿಕೆಯತ್ತಲೇ ಸಾಗುತ್ತಾ ಇತ್ತು. ಚಿನ್ನದ ಮೇಲಿನ ಆಸೆಯನ್ನೇ ಬಿಟ್ಟು ಬಿಡಬೇಕು…

1 hour ago

ಮುಂದಿನ ಸಿಎಂ ಡಿಕೆ ಶಿವಕುಮಾರ್; ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಾಜಕೀಯ ಜಪ..!

ಬೆಂಗಳೂರು; ಇಷ್ಟು ದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಬಣದವರು ನಮ್ಮ ನೆಕ್ಸ್ಟ್ ಸಿಎಂ ಡಿಕೆ ಶಿವಕುಮಾರ್ ಅಂತಾನೇ ಹೇಳ್ತಾ…

2 hours ago

ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲದಿದ್ದರೆ ಹೊರಡಿ : ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 25 :  ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮಾತ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಚಿವರು,…

3 hours ago

ನಮ್ಮ ಅವಧಿಯಲ್ಲಿಯೇ ಪಿ.ಬಿ. ರಸ್ತೆ ಅಗಲೀಕರಣ ಪೂರ್ಣಗೊಳ್ಳಬೇಕು : ಸಚಿವ ಡಿ.ಸುಧಾಕರ್

ಚಿತ್ರದುರ್ಗ, ಮಾರ್ಚ್. 25 : ನಗರದ ಪಿ.ಬಿ. ರಸ್ತೆ ಅಗಲೀಕರಣ ಕಾರ್ಯ ನಮ್ಮ ಅಧಿಕಾರ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕು. ಭೂಸ್ವಾಧೀನಾಧಿಕಾರಿ ವೆಂಕಟೇಶ್…

5 hours ago

ಸರ್ಕಾರಿ ಆಸ್ಪತ್ರೆಗಳಲ್ಲಿಯೇ ತಾಯಿ ಮರಣ, ಸಿಜೇರಿಯನ್ ಹೆರಿಗೆ ಹೆಚ್ಚಳ : ಬಡವರ ಹೆಣ್ಣು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ ? ಕೆಡಿಪಿ ಸಭೆಯಲ್ಲಿ ಭಾರೀ ಚರ್ಚೆ..!

ಚಿತ್ರದುರ್ಗ. ಮಾರ್ಚ್. 25: ರಾಜ್ಯದ ಸರಾಸರಿಗಿಂತಲೂ, ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಹಾಗೂ ಸಿಜೇರಿಯನ್ ಪ್ರಮಾಣ ಹೆಚ್ಚಳಕ್ಕೆ ಕೆಡಿಪಿ…

5 hours ago

ಪಪ್ಪಾಯಿ ಹಣ್ಣಿನ ಆರೋಗ್ಯ ಪ್ರಯೋಜನಗಳೇನು ಗೊತ್ತಾ ?

  ಸುದ್ದಿಒನ್ ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಹಣ್ಣು. ಇದು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೃದಯದ ಆರೋಗ್ಯ…

7 hours ago