ತುಮಕೂರು: ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಜಿ ಶಾಸಕ ಕೆ ಎನ್ ರಾಜಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಆಜಾನ್ ಕೂಗುವುದು ಇವತ್ತಿನದು, ನಿನ್ನೆಯದ್ದಲ್ಲ. ಎಲ್ಲಾದರೂ ನಾವೂ ಭಾಷಣ ಮಾಡುತ್ತಾ ಇದ್ದರೆ ಅದೇ ಸಮಯದಲ್ಲಿ ಇವರು ಆಜಾನ್ ಕೂಗಿದರೆ ನಾವೂ ಭಾಷಣ ನಿಲ್ಲುಸುತ್ತಿದ್ದೆವು. ಬಳಿಕ ಭಾಷಣ ಶುರು ಮಾಡುತ್ತಿದ್ದೆವು. ಅದು ಮೊದಲಿನಿಂದಲೂ ನಡೆದುಕೊಂಡು ಬಂದಿರುವಂತದ್ದು. ಅವೆಲ್ಲ ಗೌರವ ಕೊಡುವಂತದ್ದು. ಅದನ್ನು ಇವ್ರು ಏಕಾಏಕಿ, ಮಾಂಸ ತಗೋಬೇಡಿ, ತಿನ್ಬೇಡಿ ಅಂತ ಹೇಳ್ತಿದ್ದಾರೆ.
ಇಂಥ ವಿಚಾರದಲ್ಲಿ ಕುಮಾರಸ್ವಾಮಿಗೆ ಅಪ್ರಿಶಿಯೇಟ್ ಮಾಡಬೇಕು. ನನ್ನನ್ನು ಸೇರಿದಂತೆ ಈ ವಿಚಾರವಾಗಿ ಧೈರ್ಯವಾಗಿ ಹೇಳುವವರು ಕಾಂಗ್ರೆಸ್ ನಲ್ಲಿ ಇಲ್ಲ. ಅದನ್ನು ಅವರು ಹೇಳಿದ್ದಾರೆ. ಪೋಲಿಗಳು ಅಂಗಡಿಗಳಲ್ಲಿ ಹಂಚ್ತಾರೆ ಅದಕ್ಕೆಲ್ಲ ಬೆಲೆ ಕೊಡುವುದಕ್ಕೆ ಆಗುತ್ತಾ ಎಂಬ ಮಾತನ್ನು ಹೇಳಿದ್ದಕ್ಕೆ ನಾನು ಅವರಿಗೆ ಬೆಂಬಲ ಸೂಚಿಸುತ್ತೇನೆ ಎಂದಿದ್ದಾರೆ.
ನಾನು, ದೇವನೂರು ಮಹಾದೇವ್, ರವಿವರ್ಮ ಕುಮಾರ್, ದ್ವಾರಕನಾಥ್, ಬರಗೂರು ರಾಮಚಂದ್ರಪ್ಪ ಇಂಥವರನ್ನು ಕರೆಸಿ ಸಮಾಜದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ವಿಚಾರ ಸಂಕೀರ್ಣವನ್ನು ತುಮಕೂರಿನಲ್ಲಿ ಅತೀ ಶೀಘ್ರದಲ್ಲೇ ಮಾಡಬೇಕು ಎಂದುಕೊಂಡಿದ್ದೇನೆ. ಆ ಮೂಲಕ ಜನರಿಗೆ ಕೆಲವೊಂದು ವಿಚಾರಗಳನ್ನು ತಿಳಿಸಬೇಕಿದೆ.
ಅದರಲ್ಲೂ ಯುವಕರಿಗೆ ತಿಳಿಸಬೇಕು. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಯುವಕರೇ ದಾರಿ ತಪ್ಪುತ್ತಿದ್ದಾರೆ ಎಂದುಕೊಳ್ಳುತ್ತಿದ್ದೇವೆ. ಅವರಿಗೆ ಉತ್ತಮ ಮಾರ್ಗದರ್ಶನ ನೀಡುವಂತ ಸೆಮಿನಾರ್ ಗಳನ್ನು ಮಾಡಬೇಕು ಎಂಬುದನ್ನು ನಿರ್ಧಾರ ಮಾಡಿದ್ದೆ, ಆದರೆ ಕೆಲವೊಂದು ಜನಕ್ಕೆ ಸೂಜಿ ಚುಚ್ಚಿದ್ರು ಹಾ ಅಂತಾರೆ ಇನ್ನು ಕೆಲವರು ದಬ್ಬಳ ಚುಚ್ಚಿದ್ರು ಮಾತಾಡಲ್ಲ. ನಮ್ಮ ಕಾಂಗ್ರೆಸ್ ನಲ್ಲಿರುವುದು ದಬ್ಬಳ ಗಿರಾಕಿಗಳು ಎಂದಿದ್ದಾರೆ.