ಮಡಿಕೇರಿ: ಕೊಡಗಿನಲ್ಲಿ ಶಾಲಾ ಆವರಣವೊಂದರಲ್ಲಿ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ನಡೆದಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ. ಹಾಗೂ ಆಕ್ಷೇಪ ಕೇಳಿ ಬರುತ್ತಿದೆ. ಈ ಸಂಬಂಧ ಸಿದ್ದರಾಮಯ್ಯ ಅವರು ಕೂಡ ಮಾತನಾಡಿದ್ದರು. ಇದೀಗ ಸಿದ್ದರಾಮಯ್ಯ ನವರ ಹೇಳಿಕೆಗೆ ತಿರುಗೇಟು ನೀಡಿರುವ ವಿರಾಜಪೇಟೆ ಶಾಸಜ ಕೆ ಜಿ ಬೋಪಯ್ಯ, ಅವನ್ಯಾರು ನಮ್ಮನ್ನು ಕೇಳುವುದಕ್ಕೆ ಎಂದಿದ್ದಾರೆ.
SDPI ಇದೆಯಲ್ಲ ಅವ್ರೆಲ್ಲ ಹಾದಿ ಬೀದಿಯಲ್ಲಿ ಹೋಗುವವರು. ಅವ್ರಿಗೆಲ್ಲಾ ನಾನು ಕೌಂಟರ್ ಕೊಡುವುದಿಲ್ಲ. ಎಸ್ಡಿಪಿಐ ಈ ದೇಶಕ್ಕೆ ಮಾರಕ. ಎಸ್ಡಿಪಿಐ ಇನ್ನೊಂದು, ಮತ್ತೊಂದು ಇಂಗ್ಲೀಷ್ ನ ಆಲ್ಫಾಬೆಟಿಕ್ ನ ಹಾಳು ಮಾಡಿ ಕೂತಿದ್ದಾರೆ. ಅವರು ಖಂಡಿತ ಈ ದೇಶಕ್ಕೆ ಮಾರಕ. ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಸಮಯವಿಲ್ಲ. ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಅಲ್ಲಿ ಹೋಗುವುದು ಒಳ್ಳೆಯದು. ಏನಾದರೂ ಸಹಾಯಬೇಕಾ ಎಂದು ಕೇಳಿದ್ದೀನಿ ಅದರಲ್ಲೇನಿದೆ ತಪ್ಪು ಎಂದಿದ್ದಾರೆ.
ನಾನೇನು ಗನ್ ಹಿಡಿದುಕೊಂಡು ಅಭ್ಯಾಸ ಮಾಡಿ, ಅಥವಾ ನನ್ನ ಮನೆಯಿಂದ ಗನ್ ತೆಗೆದುಕೊಂಡು ಏನು ಹೋಗಿಲ್ಲ. ಹೇಳಿಕೆ ಕೊಡುವ ಮೊದಲು ಸಿದ್ದರಾಮಯ್ಯ ಅದನ್ನು ತಿಳಿದುಕೊಳ್ಳಬೇಕು. ಗನ್ ಹಿಡಿಯುವುದು ನಮ್ಮ ಜನ್ಮ ಹಕ್ಕು. ಇವನ್ಯಾರು ಅದನ್ನು ಕೇಳುವುದಕ್ಕೆ. ಏಕವಚನ ಪ್ರಯೋಗ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಮೇಲೆ ಹರಿಹಾಯ್ದಿದ್ದಾರೆ.