ಹಾವೇರಿ: ಕಾರ್ಣಿಕ ಭವಿಷ್ಯವೆಂದರೆ ಎಲ್ಲೆ ಚಿತ್ತ ಆ ಕಡೆ ನೆಟ್ಟಿರುತ್ತದೆ. ಇಂದು ಕೂಡ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಗೊರವಪ್ಪ ನಾಗಪ್ಪ ಉರ್ಮಿ ಅವರು ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಬಿಲ್ಲನ್ನೇರಿ ಭವಿಷ್ಯ ನುಡಿದಿದ್ದಾರೆ. ಆಕಾಶದ ಗುದ್ದಕ್ಕಲೆ ಶಿಶು ಏರಿತಲೆ ಪರಾಕ್ ಎನ್ನುತ್ತಾ ಗೊರವಪ್ಪ ಭವಿಷ್ಯ ನುಡಿದಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆದಿದೆ. ಈ ಉತ್ಸವದಲ್ಲಿ, ಸಣ್ಣ ಸಣ್ಣ ರೈತರಿಗೂ ಈ ಬಾರಿ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವರಾಜಕಾರಣಿ ಮುಖ್ಯಮಂತ್ರಿಯಾಗಲಿದ್ದಾನೆ ಎಂದು ಭವಿಷ್ಯ ನುಡಿದಿದೆ. ದೇವರಗುಡ್ಡದಲ್ಲಿ ನಡೆಯುವ ಕಾರ್ಣಿಕದ ಮೇಲೆ ಜನರಿಗೆ ಅಪಾರವಾದ ನಂಬಿಕೆ ಮೊದಲಿನಿಂದಾನು ಇದೆ. ಇದೀಗ ಮುಖ್ಯಮಂತ್ರಿಯಾಗುವ ಆ ಯುವರಾಜಕಾರಣಿ ಯಾರು ಎಂಬುದೇ ಎಲ್ಲೆ ತಲೆಯೊಳಗಿರುವ ಪ್ರಶ್ನೆಯಾಗಿದೆ.