ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಮ್ಯೂಸಿಕ್ ಬಳಸಿದ್ದಕ್ಕಾಗಿ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಕಾಂಗ್ರೆಸ್ ಟ್ವಿಟ್ಟರ್ ಖಾತೆಗೆ ನಿರ್ಬಂಧ ಹೇರಲಾಗಿತ್ತು. ಇಂದು ಕರ್ನಾಟಕ ಹೈಕೋರ್ಟ್ ಆ ಆದೇಶವನ್ನು ತೆರವುಗೊಳಿಸಿದೆ.
ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶ ತೆರವುಗೊಳಿಸಿದೆ. ಕೆಜಿಎಫ್ ಮ್ಯೂಸಿಕ್ ತೆಗೆಯುತ್ತೇವೆಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿರುವ ಹಿನ್ನಲೆ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದೆ.
ಇನ್ನು ಈ ಹಾಡು ತೆಗೆದಿರುವ ಬಗ್ಗೆ ಸ್ಕ್ರೀನ್ ಶಾಟ್ ಅನ್ನು ಎಂಆರ್ಟಿ ಸಂಸ್ಥೆಗೆ ಕಳುಹಿಸುತ್ತೇವೆ ಎಂದಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಈ ವೇಳೆ, ಯಾತ್ರೆಯ ವಿಡಿಯೋಗಳಿಗೆ ಅನುಮತಿ ಪಡೆಯದೆ ಕೆಜಿಎಫ್ ಸಿನಿಮಾದ ಮ್ಯೂಸಿಕ್ ಬಳಸಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಸೇರಿದಂತೆ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರ ಮೇಲೂ ಕೇಸ್ ದಾಖಲಾಗಿತ್ತು.