ರಾಮನಗರ: ಜಿಲ್ಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಮೈತ್ರಿ ಸರ್ಕಾರವನ್ನು ತೆಗೆಯತಕ್ಕಂತ ಕುತಂತ್ರದ ರಾಜಕಾರಣವನ್ನು ಮಾಡಿದ್ದೇ ಬಿಜೆಪಿ ನಾಯಕರು. ನಾನು ಯಾಕೆ ಮೌನಕ್ಕೆ ಶರಣಾಗಿದ್ದೆ..? ನನ್ನ ಸರ್ಕಾರ ಹೋದ ಎರಡೇ ತಿಂಗಳಿಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ, ಲಕ್ಷಾಂತರ ಜನ ಬೋದಿಗೆ ಬಂದ್ರು, ಬೆಳೆ ನಾಶ ಆಯ್ತು, ಇಂಥಹ ಸಂದರ್ಭದಲ್ಲಿ ಸರ್ಕಾರವನ್ನು ದೊಡ್ಡ ಮಟ್ಟದಲ್ಲಿ ಟೀಕೆ ಮಾಡುತ್ತಾ ಹೋದರೆ ಆ ಜನರ ಬದುಕನ್ನ ಕಟ್ಟುವ ಒನ್ಯಾವುದೋ ಯೋಚನೆಯ ದೃಷ್ಟಿಯಲ್ಲಿರ್ತಾರೆ ಅಂತ ಸುಮ್ಮನಾದೆ.
ಜನತೆಯ ಬದುಕನ್ನು ಕಟ್ಟಲಿ ಮೊದಲು ಅಂತ ಸುಮ್ಮನೆ ಆದೆ. ನಂತರ ಕೋವಿಡ್ ಶುರುವಾಯ್ತು. ಎರಡು ವರ್ಷದ ಕೋವಿಡ್ ಅನಾಹುತದಲ್ಲಿ ನಾವೂ ಬೆಂದ ಮನೆಯಲ್ಲಿ ಗಳ ಇರಿಯುವಂತ ಕೆಲಸ ಮಾಡುವುದು ಬೇಡ ಅಂತ ಅವಕಾಶ ಕೊಟ್ಟಿದ್ದೇವೆ. ಆ ಅವಕಾಶವನ್ನು ಯಾವ ರೀತಿ ನಡೆಸಿದ್ದಾರೆ ಎಂಬುದನ್ನು ಚರ್ಚೆ ಮಾಡುವುದಿಲ್ಲ. ಈಗ ಎಲ್ಲವೊಂದು ಸಮಾಜದಲ್ಲಿ ಸರಸ್ಯ ಇದ್ದಾಗ, ಯಾವುದೋ ಅಂಗಪಕ್ಷದ ಮುಖಾಂತರ ನಾಡುನಲ್ಲಿ ಸಾಮರಸ್ಯದ ಕೊರತೆಯನ್ನು ಮಾಡುತ್ತಿದ್ದಾರೆ.
ಕಾಂಗ್ರೆಸ್ ನವರು ಧ್ವನಿ ಎತ್ತಲಿಲ್ಲ. ಯಾರು ಹಾಗಾದ್ರೆ ಧ್ವನಿ ಎತ್ತಬೇಕು. ಅದಕ್ಕೋಸ್ಕರ ಧ್ವನಿ ಎತ್ತಿದ್ದೇನೆ. ಬಿಜೆಪಿ ನಾಯಕರು ಈ ರೀತಿಯ ನಡವಳಿಕೆ ಯಾವ ರೀತಿ ಇದೆ ಅಂದ್ರೆ ನಮ್ಮ ಒಂದು ಮೌನವನ್ನೇ ಅವರಿಷ್ಟ ಬಂದಂಗೆ ನಡೆಸಬಹುದು ಎಂಬ ಭಾವನೆಯಿಂದ ಹೊರಟರೆ, ನಾಳೆ ಬೆಳಗ್ಗೆ ಜನಕ್ಕೆ ಉತ್ತರ ಕೊಡಲಿ ಎಂದಿದ್ದಾರೆ.
ಇಂಥ ವಿಚಾರಗಳು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗ್ತಾವೆ ಎಂಬ ಪ್ರಶ್ನೆಗೆ, ಈ ರೀತಿ ಜಟ್ಕಾ, ಹಲಾಲ್, ಡ್ರೈವರ್ ಗಳು ಅಂತ ಏನಿದೆ. ದಕ್ಷಿಣ ಭಾರತ ಬಿಜೆಪಿಯ ಹೆಬ್ಬಾಗಿಲು ಅಂದ್ರಲ್ಲ ಆ ಹೆಬ್ಬಾಗಿಲನ್ನು ಕನ್ನಡಿಗರು ಕ್ಲೋಸ್ ಮಾಡುವ ದಿನ ಪ್ರಾರಂಭವಾಗುತ್ತೆ ಎಂದಿದ್ದಾರೆ.