ಮತ್ತೊಂದು ಆಡಿಯೋ ವೈರಲ್.. ಮಹಿಳಾ ಅಧಿಕಾರಿ ಜೊತೆ ಶಾಸಕರ ಮಾತು ಕೇಳಿ ಜನ ಶಾಕ್..!

 

ಕೊಪ್ಪಳ: ಇತ್ತೀಚೆಗೆ ರಾಜಕಾರಣಿಗಳ ಸಂಥಿಂಗ್ ಸಂಥಿಂಗ್ ಆಡಿಯೋ, ವಿಡಿಯೋಗಳು ಆಗಾಗ ವೈರಲ್ ಆಗ್ತಾನೆ ಇರುತ್ವೆ. ಇದೀಗ ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ್ ದಡೇಸುಗೂರು ಅವರದೆನ್ನುವ ಆಡಿಯೋವೊಂದು ವೈರಲ್ ಆಗಿದೆ.

ಅದು ಮಹಿಳಾ ಅಧಿಕಾರಿಯ ಜೊತೆಗಿನ ಸಂಭಾಷಣೆ. ಈ ಸಂಭಾಷಣೆ ಕೇಳಿ, ಜಿಲ್ಲೆಯ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇವ್ರಾ, ಹೀಗೆಲ್ಲಾ ಮಾತಾಡಿದ್ದು, ನಾಚಿಕೆಯಾಗಲ್ವಾ ಎಂಬ ಮಟ್ಟಿಗೆ ಬೈಗುಳ ಶುರು ಮಾಡಿದ್ದಾರಂತೆ. ಹಾಗಾದ್ರೆ ಆ ಆಡಿಯೋದಲ್ಲಿ ಏನಿದೆ ಗೊತ್ತಾ..?

ಆ‌ ಮಹಿಳೆಯ ಧ್ವನಿ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಅಧಿಕಾರಿಯದ್ದು ಎನ್ನಲಾಗುತ್ತಿದೆ. ಆ ಆಡಿಯೋದಲ್ಲಿ ಮಹಿಳೆ ಮಾತಾಡಿದ್ದು, ಸರ್ ನಾನು ಒಬ್ಬಳೇ ಬರ್ತಾ ಇದ್ದೀನಿ. ದಯಮಾಡಿ ನಾನು ಇರಿಟೇಟ್ ಆಗಿ ನಾನು ಏನೋ ಮಾಡೋ ಥರ ಮಾಡ್ಬೇಡಿ. ತಲೆ ಕೆಟ್ಟು ನಾನು ಏನಾದ್ರೂ ಮಾಡ್ದೆ ಅಂದ್ರೆ. ಎಲ್ಲಾದ್ರೂ ಹಾಳಾಗೋಗುತ್ತೆ. ಮರ್ಯಾದೆಯಿಂದ ಹೇಳಕತ್ತೀನಿ ನನಗೆ ಸರಿಯಾಗಿ ರೆಸ್ಪಾಂಡ್ ಮಾಡಿದ್ರೆ ಸರಿ. ಇಲ್ಲಂದ್ರೆ ಕೆಟ್ಟೆ ಹೋಗ್ತದ ನಾನ ಹೇಳ್ತೀನಿ ಎಂಬ ಮಹಿಳೆಯ ಹೇಳಿಕೆಗೆ, ಶಾಸಕರ ಮಾತು ಹೀಗಿದೆ.

ನನಗಂತೂ ಏನು ಗೊತ್ತಿಲ್ಲ. ಆ ಬಗ್ಗೆ ಏನೂ ಐಡಿಯಾ ಇಲ್ಲ ಅಷ್ಟೊಂದು. ಈ ಥರ ಜಗಳಗಂಟಿನ ನಾನೇಲ್ಲೂ ನೋಡಿಲ್ಲ ಎಂದಿದ್ದಾರೆ.

ಆಗ ಮಹಿಳೆ ಜಗಳಗಂಟಿನಾ ನಿನ್ನ ಟಾರ್ಚರ್ ಯಾವನ್ ತಡೆದುಕೊಳ್ತಾನೆ ಎಂದಿದ್ದಾರೆ. ಹೀಗೆ ಮಾತುಗಳು ಮುಂದುವರೆದಿದ್ದು, ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

suddionenews

Recent Posts

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

2 minutes ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

9 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

9 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

9 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

9 hours ago

ವಾಹನ ಚಾಲನೆ ವೇಳೆ ತಾಳ್ಮೆ ಅಗತ್ಯ : ಮಹಾಂತೇಶ್

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…

10 hours ago