Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಬೀರಾನಂದಾಶ್ರಮ ಸರ್ವ ಜನಾಂಗದ ಶಾಂತಿಯ ತೋಟ : ಮಾದಾರ ಚನ್ನಯ್ಯ ಸ್ವಾಮೀಜಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್,

ಮೊ : 87220 22817

ಚಿತ್ರದುರ್ಗ(ನ.10) : ಕಬೀರಾನಂದಾಶ್ರಮ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರದೇ,ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಅಭೀಪ್ರಾಯಪಟ್ಟಿದ್ದಾರೆ.

ನಗರದ ಕಬೀರಾನಂದ ಆಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಲಿಂಗಾನಂದ ಶ್ರೀಗಳು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಪ್ರತಿ ವರ್ಷ ಶ್ರೀಗಳ ಹುಟ್ಟು ಹಬ್ಬ ಚಿಕ್ಕದಾದರೂ ಸಹಾ ಚೂಕ್ಕವಾಗಿ ನಡೆಯುತ್ತಿದೆ. ಇದರಲ್ಲಿ ತಪ್ಪದೇ ಭಾಗವಹಿಸುವುದರ ಮೂಲಕ ಅವರ ಸಂತೋಷದಲ್ಲಿ ನಾನು ಸಹಾ ಭಾಗಿಯಾಗುತ್ತಿದ್ದೇನೆ. ಜಗತ್ತಿನಲ್ಲಿ ಪರಂಪರೆಯನ್ನು ಕಟ್ಟಿದ ದಾರ್ಶನಿಕರಲ್ಲಿ ಕೆಲವರು ಮಾತ್ರ ಇದ್ದಾರೆ. ಕೆಲವರು ಧರ್ಮವನ್ನು ಸ್ಥಾಪಿಸಿ ಹೋದ ನಂತರ ಅವರ ಹೆಸರನ್ನು ಹೇಳುವುದು ಬಹಳ ಕಷ್ಠವಾಗಿದೆ. ಬೌದ್ದವನ್ನು ಸ್ಥಾಪಿಸಿದ ಬುದ್ದನ ಹೆಸರನ್ನು ಹೇಳುತ್ತವೆ ಅಮೇಲೆ ಬೇರೆಯವರ ಹಸರನ್ನು ಹೇಳಲು ಸಾಧ್ಯವಿಲ್ಲ. ವಿವಿಧ ದರ್ಮವನ್ನು ಮುಂದುವರೆದ ಕೂಡ್ಯೊಯುವವರ ಹೆಸರನ್ನು ಹೇಳಲು ಸಾಧ್ಯವಿಲ್ಲ ಎಂದರು.
ದೇಶವನ್ನು ಆಳಿದ ಪ್ರಧಾನ ಮಂತ್ರಿಗಳಲ್ಲಿ ಕೆಲವರ ಹೆಸರನ್ನು ಮಾತ್ರ ಹೇಳಲು ಸಾಧ್ಯವಿದೆ. ಜನ ಮಾನಸದಲ್ಲಿ ಹೆಸರನ್ನು ಉಳಿಯುವಂತೆ ಮಾಡಿದವರ ಹೆಸರು ಮಾತ್ರ ಹೇಳಲು ಸಾಧ್ಯವಿದೆ.

ಬಸವಣ್ಣನವರು ಯಾವುದೇ ಮಠ, ಡ್ಯಾಂ, ಅರಮನೆಯನ್ನು ನಿರ್ಮಾಣ ಮಾಡಿಲ್ಲ, ಆದರೆ ಜನತೆ ಅಗತ್ಯವಾದ ಸಾಮಾಜಿಕ ನ್ಯಾಯವನ್ನು ಕೂಡಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದರು ಇದರಿಂದ ಇವರು ಹೆಚ್ಚಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಇದ್ದಲ್ಲದೆ ಮಹಿಳೆಯರಿಗೆ ಸಮಾನತೆಯನ್ನು ನೀಡಿದ್ದರಿಂದ 900 ವರ್ಷವಾದರೂ ಸಹಾ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಚಿತ್ರದುರ್ಗದ ಪಾಳೆಗಾರರಲ್ಲಿ ಹಲವಾರು ಜನ ಆಳ್ವಿಕೆಯನ್ನು ನಡೆಸಿದ್ದರೂ ಸಹಾ ಎಲ್ಲರು ಮದಕರಿನಾಯಕನನ್ನು ಮಾತ್ರ ನನೆಸುತ್ತಾರೆ ಬೇರೆಯವರು ಮುಂದಿನ ಪೀಳಿಗೆಗೆ ಏನಾದರೂ ಕೂಡುಗೆಯನ್ನು ನೀಡಿದ್ದರೆ ಅವರ ಹೆಸರನ್ನು ಹೇಳಲು ಸಾಧ್ಯವಿದೆ ಎಂದರು.

ಸಿದ್ದರೂಢ ಮಹಾತ್ಮರು ದೇಶಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ್ದಾರೆ, ನಗರದ ಕಬೀರಾನಂದ ವೃತ್ತದಲ್ಲಿ ಸಿದ್ದಾರೂಢರು ಚಿಕ್ಕದಾಗಿ ಆಶ್ರಮವನ್ನು ಆರಂಭ ಮಾಡಿದರು ಈಗ ಅದು ದೂಡ್ಡದಾಗಿ ಬೆಳೆದು ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ. ಇದರೊಂದಿಗೆ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಶಿವಲಿಂಗಾನಂದ ಶ್ರೀಗಳು ತ್ರಿವಿಧ ದಾಸೋಹವನ್ನು ಮಾಡಿದ್ದಾರೆ. ಇವರ ಹೆಸರು ಶಶ್ವಾತವಾಗಿ ಉಳಿಯಲು ಇವರು ಮಾಡಿದ ಅನ್ನ, ಶಿಕ್ಷಣ ಮತ್ತು ಜ್ಞಾನದ ದಾಸೋಹ ಕಾರಣವಾಗಿದೆ. ಇದರಿಂದ ಪರಮ ಪೂಜ್ಯರ ಹೆಸರು ಶಾಶ್ವತವಾಗಿ ಉಳಿಯಲು ಕಾರಣವಾಗಿದೆ. ಶಿವರಾತ್ರಿ ಮಹೋತ್ಸವನ್ನು ಶ್ರೀಗಳು ಬಂದ ಮೇಲೆ ಉತ್ತಮವಾದ ರೀತಿಯಲ್ಲಿ ಮಾಡಿದ್ದಾರೆ. ದೇಶವೇ ನೋಡುವಂತೆ ಆಚರಣೆಯನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಉತ್ತಮವಾದ ವೇದಿಕೆಯನ್ನು ನಿರ್ಮಾಣ ಮಾಡಿ ಎಲ್ಲರು ಮಾತನಾಡುವ ರೀತಿಯಲ್ಲಿ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಬಸವಮೂರ್ತಿ ಶ್ರೀಗಳು ತಿಳಿಸಿದರು.

ಹಿಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಮಹಾಶಿವರಾತ್ರಿ ಮಹೋತ್ಸವನ್ನು ಮಾರ್ಪಾಡು ಮಾಡಿದ್ದಾರೆ. ಈಗಿನ ಕಾಲಕ್ಕೆ ಅನುಗುಣವಾಗಿ ಆಚರಣೆ ಮಾಡಲಾಗುತ್ತಿದೆ. ಇಲ್ಲಿ ಎಲ್ಲಾ ಜನಾಂಗದವರು ಸಹಾ ಆಗಮಿಸಿ ಶ್ರೀಗಳ ಆರ್ಶೀವಾದವನ್ನು ಪಡೆಯುತ್ತಾರೆ. ಕಬೀರಾನಂದಾಶ್ರಮ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರದೇ,ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇದರಲ್ಲಿ ಸೇರುವುದರ ಮೂಲಕ ಕನಿಷ್ಠ ಎಲ್ಲರು ಒಂದೇ ಎಲ್ಲರು ಮಾನವರು ಎಂದು ಸನ್ಮಾರ್ಗದಲ್ಲಿ ಕೊಂಡ್ಯೂಯುವ ಕೆಲಸವಾಗುತ್ತಿದೆ. ಶ್ರೀಮಠ ಇದುವರೆವಿಗೂ ಯಾವುದೇ ಧರ್ಮದ ಜಾತಿಯ ಸೋಂಕನ್ನು ಅಂಟಿಸಿಕೊಳ್ಳದೆ ಎಲ್ಲರನ್ನು ಅಪ್ಪಿಕೊಳ್ಳುವ ಕಾರ್ಯವನ್ನು ಮಾಡಲಾಗುತ್ತಿದೆ. ಶ್ರೀಗಳು ಜಾತ್ಯಾತೀತ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ ಎಂದರು.

ಯೋಗ ಶಿಕ್ಷಕ ಗೋವಿಂದ ಸ್ವಾಮಿ ಮಾತನಾಡಿ, ಭಕ್ತಿಗೆ ಮೀಗಿಲಾದ್ದು ಯಾವುದೂ ಇಲ್ಲ, ಮಠ ಮಂದಿರಗಳಲ್ಲಿ ಭಕ್ತಿ ಇದೆ. ಭಕ್ತಿಯಿಂದ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯವಿದೆ. ಇಂದಿನ ಟಿವಿಯಲ್ಲಿ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವಂತ ಯಾವುದೇ ಕಾರ್ಯಕ್ರಮಗಳು ಪ್ರಸಾರವಾಗುವುದಿಲ್ಲ  ಇದರ ಬದಲಾಗಿ  ಪುಸ್ತಕವನ್ನು ಓದುವ ಅಬ್ಯಾಸವನ್ನು ಮಾಡಿಕೊಳ್ಳಿ ನಮ್ಮ ಮೆದುಳು ಸದಾ ನೆಗೆಟಿವ್ ಬಗ್ಗೆ ಅಲೋಚನೆ ಮಾಡುತ್ತದೆ ಅದನ್ನು ಪಾಜಿಟವ್ ಮಾಡುವ ಕಾರ್ಯವನ್ನು ಮಾಡಬೇಕಿದೆ ಇದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಿರಿಯರ ಮಾತುಗಳನ್ನು ಆಲಿಸುವುದರಿಂದ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಬೀರಾನದಾಶ್ರಮದ ಶ್ರೀಗಳಿ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಇಂದಿನ  ದಿನಮಾನದಲ್ಲಿ ಜನತೆಯ ಮನಸ್ಸುಗಳು ಸರಿ ಇಲ್ಲ ಅದನ್ನು ಸರಿಪಡಿಸುವ ಕಾರ್ಯವಾಗಬೇಕಿದೆ. ದೇವರು ಯಾವುದೇ ಸಂಪತ್ತಿಗೆ ಒಲಿಯುವುದಿಲ್ಲ ಶ್ರದ್ದೆ ಮತ್ತು ಭಕ್ತಿಗೆ ಒಲಿಯುತ್ತಾನೆ, ಭಕ್ತಿ ಇದ್ದ ಕಡೆಯಲ್ಲಿ ದೇವರು ಇರುತ್ತಾರೆ. ದೇವನನ್ನು ಮನಸ್ಸಿನಲ್ಲಿ ಪೊಜಿಸಬೇಕಿದೆ ಮೂರ್ತಿಯಲ್ಲಿ ಅಲ್ಲ, ಇದರಲ್ಲಿ ಪೂಜೆ ಮಾಡಿದರೆ ದೇವರು ಒಲಿಯುವುದಿಲ್ಲ. ಶುದ್ದವಾದ ಭಾವನೆಯಿಂದ ಮಾತ್ರ ಒಲಿಯಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಭದ್ರಾವತಿ ಸಿದ್ದಾರೂಢ ಮಠದ ಕಾರ್ಯದರ್ಶೀ ರಾಮಸ್ವಾಮಿ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯ ಓಂಕಾರ್ ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಭಾಗವಹಿಸಿದ್ದರು. ಸುಬ್ರಾಯ ರ್ಬಟ್ರು ವೇದ ಘೋಷವನ್ನು ಮಾಡಿದರೆ ಸಂಸ್ಕøತ ಶಿಕ್ಷಕಿ ಸುಮನ ಪ್ರಾರ್ಥಿಸಿದರು, ವೀರಣ್ಣ ಸ್ವಾಗತಿಸಿದರು ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | 4 ಕೋಟಿ ವೆಚ್ಚದ ರೋಟರಿ ಕ್ಲಬ್‌ನ ಡಯಾಲಿಸಿಸ್‌ ಕೇಂದ್ರದ ಕನಸಿನ ಯೋಜನೆಗೆ ಎನ್.ಜೆ.ದೇವರಾಜರೆಡ್ಡಿ ಸಾಥ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್‍ಗೆ ಒಳಗಾಗುವ ರೋಗಿಗಳಿಗೆ ಪರಿಶುದ್ದವಾದ ನೀರಿನ ಅವಶ್ಯಕತೆಯಿದೆ ಎನ್ನುವುದನ್ನು

ಸ್ವಾತಂತ್ರ್ಯ ಹೋರಾಟಗಾರ ಸಣ್ಣರಾಮಪ್ಪ ನಿಧನ

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಸ್ವಾತಂತ್ರ್ಯ ಹೋರಾಟಗಾರ ಸಣ್ಣರಾಮಪ್ಪ(96) ಶನಿವಾರ ಮಧ್ಯಾಹ್ನ 1 ಗಂಟೆಗೆ ಚಳ್ಳಕೆರೆ ತಾಲ್ಲೂಕು ಚಿತ್ರನಾಯಕನಹಳ್ಳಿಯಲ್ಲಿರುವ ನಿವಾಸದಲ್ಲಿ ನಿಧನರಾದರು. ಬಿಜೆಪಿ. ಜಿಲ್ಲಾ ಎಸ್ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ

ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ

  ಚಿತ್ರದುರ್ಗ. ಡಿ.21: ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಗೆ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹಾಗೂ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ

error: Content is protected !!