ಬೆಳಗಾವಿ: ಎಂಇಎಸ್ ಪುಂಡರ ಪುಂಡಾಟಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲೂ ಇಂದು ಈ ವಿಚಾರ ಚರ್ಚೆಯಾಗಿದೆ. ಈಗಾಗಲೇ ಬೆಳಗಾವಿಯಲ್ಲೆ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದಾರೆ.
ಈ ವೇಳೆ ಕಲಾಪದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿದ್ದು, ರಾಯಣ್ಣನ ಪ್ರತಿಮೆಗೆ ಹಾನಿ ಮಾಡ್ತಾರೆ ಅಂದ್ರೆ ಅವರು ಹೇಡಿಗಳು ಅಂತಾನೆ ಅರ್ಥ. ಅದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ ಅದು ಮಹಾರಾಷ್ಟ್ರ ಹೇಡಿಗಳ ಸಮಿತಿ ಎಂದಿದ್ದಾರೆ. ಅವರು ಹೇಡಿಗಳು ಅಲ್ಲ ಎನ್ನುವುದಾದರೆ ಬೆಳಗ್ಗೆ ಬರಲಿ ಎಂದು ಕಿಡಿಕಾರಿದ್ದಾರೆ.
ಇನ್ನು ರಾಯಣ್ಣ ಸತ್ತ ಮೇಲೂ ಅವರ ವಿರುದ್ಧ ಪಿತೂರಿ ಮಾಡೋದನ್ನ ಬಿಡ್ತಿಲ್ಲ. ಪ್ರತಿಮೆಗೆ ಅವಮಾನ ಮಾಡಿದವರನ್ನ ಸುಮ್ಮನೆ ಬಿಡಬಾರದು. ಗುಂಡಿಟ್ಟು ಕೊಲ್ಲಬೇಕು. ಈಗ ಹೇಡಿಗಳಿಗೆ ಉತ್ತರ ಕೊಡೋ ಸಮಯ ಬಂದಿದೆ. ಪುಂಡಾಟ ನಡೆಸದಂತೆ ಅವರನ್ನ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.