ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜೂ.ಎನ್ಟಿಆರ್, ರಜನಿಕಾಂತ್ ಉಪಸ್ಥಿತರಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ ಟಿ ಆರ್ ತಮ್ಮ ಸರಳತೆಯ ಸ್ವಭಾವವನ್ನು ತೋರಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಅಪ್ಪು ಫ್ಯಾನ್ಸ್ ದಿಲ್ ಖುಷ್ ಆಗಿದೆ.
ಕಾರ್ಯಕ್ರಮ ನಡೆಯುವ ವೇಳೆಗೆ ಮಳೆರಾಯನ ಸ್ವಾಗತವಾಗಿದೆ. ಈ ವೇಳೆ ವೇದಿಕೆ ಮೇಲಿದ್ದ ಗಣ್ಯರ ಖುರ್ಚಿಗಳು ಮಳೆ ಹನಿಯಿಂದ ತೇವವಾಗಿತ್ತು. ಆದರೆ ಈ ವೇಳೆ ವೇದಿಕೆ ಕೂರವೇಕಾಗಿದ್ದ ಸಂದರ್ಭ ಬಂದಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ವೇದಿಕೆ ಏರಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಕುಳಿತುಕೊಳ್ಳುವುದಕ್ಕೂ ಮುನ್ನ ಖುರ್ಚಿ ಬಳಿ ಜೂ.ಎನ್ ಟಿ ಆರ್ ಬಂದಿದ್ದಾರೆ.
ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿಯಿಂದ ಬಟ್ಟೆಯೊಂದನ್ನು ತೆಗೆದುಕೊಂಡು ಖುರ್ಚಿ ಹೊರೆಸಿದ್ದಾರೆ. ಬಳಿಕ ಸುಧಾಮೂರ್ತಿಯವರ ಖುರ್ಚಿಯನ್ನು ಹೊರೆಸಿದ್ದಾರೆ. ಜೂ.ಎನ್ ಟಿ ಆರ್ ಅವರ ಈ ಸರಳತೆ ಗುಣಕ್ಕೆ ವೇದಿಕೆ ಮೇಲಿದ್ದವರು ಸಹ ಖುಷಿಯಾಗಿದ್ದಾರೆ. ಅಪ್ಪು ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ.