ಬಾಲಿವುಡ್ ನಟ-ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗಳ ಆಗಮನದಿಂದ ಎಲ್ಲರಲ್ಲೂ ಖುಷಿ ಇದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಬೆಂಗಳೂರಿಗೂ ಬಂದಿದ್ದರು. ಮಗಳು ಧುವಾಗೀಗ ಮೂರು ತಿಂಗಳು. ಮನೆಯಲ್ಲಿ ಮೂರು ತಿಂಗಳ ಹುಟ್ಟುಹಬ್ಬವನ್ನು ಅಚರಣೆ ಮಾಡಿದ್ದಾರೆ. ಈ ಸಂತಸದ ಸಮಯದಲ್ಲಿ ಧುವಾ ಅಜ್ಜಿ ಮೊಮ್ಮಗಳಿಗೋಸ್ಕರ ತ್ಯಾಗ ಮಾಡಿದ್ದಾರೆ.
ಮೊಮ್ಮಗಳು ಧುವಾಳಿಗೆ ಮೂರು ತಿಂಗಳು ತುಂಬಿದ ಸಂಭ್ರಮ. ಮೊಮ್ಮಗಳ ಚೆನ್ನಾಗಿರಲೆಂದು ರಣವೀರ್ ಸಿಂಗ್ ತಾಯಿ ಅಂಜು ಭವ್ನಾನಿ ತನ್ನ ಕೂದಲನ್ನು ತ್ಯಾಗ ಮಾಡಿದ್ದಾರೆ. ಮುಂಬೈನ ಪ್ರತಿಷ್ಟಿತ ಹೆಚ್ ಎಸ್ ರಿಲಯನ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು. ಡಿಸೆಂಬರ್ 8ಕ್ಕೆ ಮೂರು ತಿಂಗಳು. ಮಗಳು ಹುಟ್ಟಿದ ಸಂಭ್ರಮವನ್ನು ಪ್ರತಿ ತಿಂಗಳು ಸೆಲೆಬ್ರೇಟ್ ಮಾಡ್ತಾರೆ. ಮೊಮ್ಮಗಳು ಮನೆಗೆ ಬಂದ ಖುಷಿಯಿಂದಾಗಿ ತನ್ನ ಕೂದಲನ್ನು ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ತಮ್ಮ ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂಜು ಭವ್ನಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಈ ವಿಶೇಷ ದಿನದಂದು ಪ್ರೀತಿ ಮತ್ತು ಭರವಸೆಯೊಂದಿಗೆ ಸಂತೋಷದಿಂದ ಆಚರಿಸುತ್ತಿದ್ದೇವೆ. ದುವಾ ಬೆಳೆಯುತ್ತಿದ್ದು ಆ ಸಂತೋಷವನ್ನು ನಾವೂ ಎಂಜಾಯ್ ಮಾಡ್ತಾ ಇದ್ದೀವಿ. ಈ ನನ್ನ ಸಣ್ಣ ಕಾರ್ಯ ಕಷ್ಟದಲ್ಲಿರುವ ಯಾರಿಗಾದರೂ ಸಹಾಯವಾಗಲಿದೆ ಎಂದು ಭಾವಿಸುತ್ತೇನೆ ಎಂದು ಅಂಜು ಭವ್ನಾನಿ ಬರೆದುಕೊಂಡಿದ್ದಾರೆ. ಮೊಮ್ಮಗಳ ಮೇಲಿನ ಪ್ರೀತಿ, ಸಾಮಾಜಿಕ ಕಳಕಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್ಸ್, ಲೈಕ್ ಮಾಡ್ತಾ ಇದಾರೆ.