ಮೈಸೂರು: ಟಿಪ್ಪು ಸುಲ್ತಾನ್ ವಿಚಾರವಾಗಿ ಪಠ್ಯ ಪುಸ್ತಕದಲ್ಲಿರುವ ವಿಚಾರ ಕೈಬಿಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವರದಿ ಸಲ್ಲಿಸಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆ ವರದಿಯಲ್ಲಿ ಏನಿದೆ..? ಅನ್ನೀ ಕುತೂಹಲ ಕೂಡ ಎಲ್ಲರಲ್ಲಿದೆ.
ಒಂದು ಮೂಲಗಳ ಮಾಹಿತಿ ಪ್ರಕಾರ ರಾಜ್ಯ ಸರ್ಕಾರ ಮೈಸೂರು ಹುಲಿ ಎಂಬ ಬಿರುದನ್ನ ಸರ್ಕಾರ ಕೈಬಿಡುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಟಿಪ್ಪುಗೆ ಮೈಸೂರು ಹುಲಿ ಎಂಬ ಬಿರುದು ಕೊಟ್ಟಿದ್ಯಾರು..? ಬಿರುದು ಕೊಟ್ಟವರ ಮಾಹಿತಿ ಪಠ್ಯದಲ್ಲಿ ಎಲ್ಲೂ ಇಲ್ಲ. ಸುಖಾ ಸುಮ್ಮನೆ ಮೈಸೂರು ಹುಲಿ ಅಂತ ವೈಭವೀಕರಣ ಮಾಡಲಾಗುತ್ತಿದೆ. ಮನಸ್ಸಿಗೆ ಬಂದಂತೆ ಟಿಪ್ಪು ಬಗ್ಗೆ ವೈಭವೀಕರಿಸಲಾಗುತ್ತಿದೆ. ಮುಖ್ಯವಾಗಿ ಟಿಪ್ಪು ಬಿರುದು ತೆಗೆಯಲು ವರದಿ ನೀಡಿದ್ದೇವೆ ಎಂದು ಪಠ್ಯ ಪುಸ್ತಕ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ಇದೆ ವೇಳೆ ಟಿಪ್ಪು ತನ್ನ ರಾಜ್ಯಬಾರದ 150ಕ್ಕೂ ಅಧಿಕ ದೇಗುಲಗಳಿಗೆ ಅನುದಾನ ನೀಡಿದ್ದರು. ಟಿಪ್ಪು ಸುಲ್ತಾನ್ ಒಬ್ಬ ಪರ ಧರ್ಮ ಸಹಿಷ್ಣುವಾಗಿದ್ದ. ಪೇಶ್ವೆಗಳ ದಾಳಿಯಿಂದ ಶಾರಾದಾಂಬ ದೇವಸ್ಥಾನ ರಕ್ಷಿಸಿದ್ದು ಟಿಪ್ಪು. ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಈ ನಡೆ ಸರಿಯಲ್ಲ. ರಾಜ್ಯ ಸರ್ಕಾರ ಜನತೆಗೆ ತಪ್ಪು ಸಂದೇಶ ಸಾರುತ್ತಿದೆ. ಟಿಪ್ಪು ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಇತಿಹಾಸ ತಿರುಚಬೇಡಿ ಎಂದು ಮಜೀದ್ ಹೇಳಿದ್ದಾರೆ.