ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ ಮ್ಯಾಚ್ ಗೆ ಆಟಗಾರರ ಹರಾಜು ಪ್ರಲ್ರಿಯೆ ಪೂರ್ಣಗೊಂಡಿದೆ. ಆದ್ರೆ ಆರ್ಸಿಬಿ ಆಟಗಾರರ ವಿಚಾರಕ್ಕೆ ಫ್ಯಾನ್ಸ್ ಗರಂ ಆಗಿದ್ದಾರೆ. ಆರ್ಸಿಬಿ ತಂಡಕ್ಕೆ ತೆಗೆದುಕೊಂಡ ಆಟಗಾರರ ಮೇಲೆ ಮೊದಲೇ ಬೇಸರವಿದೆ. ಅದರ ಜೊತೆಗೆ ಇದೀಗ ಕನ್ನಡ ಆಟಗಾರರನ್ನೆ ತೆಗೆದುಕೊಳ್ಳದ ಕಾರಣ ಮತ್ತಷ್ಟು ಬೇಸರಕ್ಕೆ ಕಾರಣವಾಗಿದೆ.
ಆರ್ಸಿಬಿ ಹರಾಜಿನಲ್ಲಿ ಆಟಗಾರರನ್ನ ಖರೀದಿಸಿದ್ದು, ಕನ್ನಡಿಗರಿದ್ದರು ಕನ್ನಡಿಗರನ್ನ ಖರೀದಿ ಮಾಡಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕದ ಯುವ ಆಟಗಾರ ಅನೀಶ್ವರ್ ಗೌತಮ್ ಹೊರತುಪಡಿಸಿದರೆ ಬೇರೆ ಯಾರು ಕನ್ನಡಿಗರಿಲ್ಲ.
ಅನೀಶ್ವರ್ ಗೌತಮ್ ಭಾರತದ ಅಂಡರ್-19 ತಂಡದಲ್ಲಿ ಮತ್ತು ಕರ್ನಾಟಕ ರಾಜ್ಯ ತಂಡದಲ್ಲಿ ಮಿಂಚು ಹರಿಸಿದ್ದಾರೆ. ಈ ಪ್ರದರ್ಶನವನ್ನು ಗಮನಿಸಿ 20 ಲಕ್ಷ ರೂ. ನೀಡಿ ಆರ್ಸಿಬಿ ಅನೀಶ್ವರ್ ಗೌತಮ್‍ರನ್ನು ಖರೀದಿಸಿದೆ. ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣರಂತಹ ಆಟಗಾರರು ಇದ್ದರೂ ಕೂಡ ಆರ್ಸಿಬಿ ಮಾತ್ರ ಕರ್ನಾಟಕದ ಆಟಗಾರರನ್ನು ಖರೀದಿಸಲು ಮುಂದಾಗಲಿಲ್ಲ. ಆರ್ಸಿಬಿ ತಂಡ ಮೆಗಾ ಹರಾಜಿನಲ್ಲಿ ಒಟ್ಟು 88.45 ಕೋಟಿ ರೂ. ಖರ್ಚು ಮಾಡಿ ಒಟ್ಟು 22 ಜನ ಆಟಗಾರರನ್ನು ಖರೀದಿಸಿದೆ.