ನವದೆಹಲಿ: ವಿಮಾನದ ತಾಂತ್ರಿಕ ದೋಷದಿಂದ ಇಂಡಿಗೋ ಶಾರ್ಜಾ-ಹೈದರಾಬಾದ್ ವಿಮಾನ ಪಾಕಿಸ್ತಾನದ ಖರಾಚಿಯಲ್ಲಿ ಭೂ ಸ್ಪರ್ಶವಾಗಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಕ ದೋಷ ಎನ್ನಲಾಗಿದೆ.
ವಿಮಾನದಲ್ಲಿ ತಾಂತ್ರಿಕ ದೋಷವನ್ನು ಪತ್ತೆಹಚ್ಚಿದ ಪೈಲಟ್ ತಕ್ಷಣ ಇಂಡಿಗೋ ಶಾರ್ಜಾ-ಹೈದರಾಬಾದ್ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ಇರಿಸಲಾಗಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ದೋಷದ ಪರಿಶೀಲನೆ ನಡೆಸುತ್ತಿದ್ದಾರೆ. ಕರಾಚಿಗೆ ಮತ್ತೊಂದು ವಿಮಾನವನ್ನು ಕಳುಹಿಸಲು ಏರ್ಲೈನ್ ಯೋಜಿಸುತ್ತಿದೆ.
ಶಾರ್ಜಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E-1406 ಅನ್ನು, ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿ, ಮುನ್ನೆಚ್ಚರಿಕೆಯಾಗಿ ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಲಾಗಿದ್ದು, ವಿಮಾನವನ್ನು ಕರಾಚಿಯಲ್ಲಿ ಇಳಿಸಲಾಗಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. 2 ವಾರಗಳಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಿದ 2 ನೇ ಭಾರತೀಯ ವಿಮಾನಯಾನ ಸಂಸ್ಥೆ ಇದಾಗಿದೆ.
ಇತ್ತೀಚೆಗೆ, ದೆಹಲಿಯಿಂದ ವಡೋದರಾಕ್ಕೆ ಹಾರುತ್ತಿದ್ದ ಇಂಡಿಗೋ ವಿಮಾನವನ್ನು ಮುನ್ನೆಚ್ಚರಿಕೆ ಕ್ರಮವಾಗಿ ರಾಜಸ್ಥಾನದ ಜೈಪುರದಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ವರದಿಗಳ ಆಧಾರದ ಮೇಲೆ ವಿಮಾನವು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಹೊಂದಿತ್ತು. ಇತ್ತೀಚಿನ ದಿನಗಳಲ್ಲಿ, ವಿವಿಧ ಏರ್‌ಲೈನ್‌ಗಳ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆಗಳ ಅನೇಕ ಘಟನೆಗಳು ತುರ್ತು ಅಥವಾ ದಿಕ್ಕುತಪ್ಪಿದ ಲ್ಯಾಂಡಿಂಗ್‌ಗಳಿಗೆ ಕಾರಣವಾಗಿವೆ.