ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಕೇಂದ್ರದಿಂದ ಎಂಟು ನ್ಯಾನೊ ಉಪಗ್ರಹಗಳು ಸೇರಿದಂತೆ ಒಂಬತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.
Andhra Pradesh | PSLV-C54 takes off from Satish Dhawan Space Centre in Sriharikota. pic.twitter.com/lxsOccncTg
— ANI (@ANI) November 26, 2022
ಸಮುದ್ರದ ಮೇಲೆ ಹವಾಮಾನವನ್ನು ಅಧ್ಯಯನ ಮಾಡಲು ಸಹ ಇದು ಉಪಯುಕ್ತವಾಗಿರುತ್ತದೆ. ಈ ಉಡಾವಣೆ ಮೂಲಕ ಭಾರತದ 1,117 ಕೆಜಿ ತೂಕದ EOS 06, 18.28 ಕೆಜಿ ತೂಕದ INS 2B, 16.15 ಕೆಜಿ ತೂಕದ ಆನಂದ್, 1.45 ಕೆಜಿ ತೂಕದ ಎರಡು ಥಾಯ್ ಬೋಲ್ಟ್ ಉಪಗ್ರಹಗಳು, 17.92 ಕೆಜಿ ತೂಕದ 4 ಯುಎಸ್ ಆಸ್ಟ್ರೋ ಕ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಾಗಿತ್ತು. ಶ್ರೀಹರಿಕೋಟಾ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಇದು 87 ನೇ ಉಡಾವಣೆ ಎಂಬುದು ಗಮನಾರ್ಹ.
LAUNCH! ISRO's PSLV rocket launches with the EOS-06 spacecraft from the Satish Dhawan Space Centre.
— Musicophile Abhishek (@MelophileAbhi22) November 26, 2022
ಪಿಎಸ್‌ಎಲ್‌ವಿ ಸಿ 54 ಯಶಸ್ವಿ ಉಡಾವಣೆಯಿಂದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂತಸ ಮನೆ ಮಾಡಿದೆ. ಈ ಯಶಸ್ಸು ಹಲವು ವರ್ಷಗಳ ಪರಿಶ್ರಮದ ಫಲ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಪಿಎಸ್‌ಎಲ್‌ವಿ ಸಿ54 ಪ್ರಯೋಗದಿಂದ ಜಲಸಂಪನ್ಮೂಲ ಮೇಲ್ವಿಚಾರಣೆ, ಚಂಡಮಾರುತದ ಮುನ್ಸೂಚನೆ ಮತ್ತು ಹವಾಮಾನವನ್ನು ಅಧ್ಯಯನ ಮಾಡುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.