ದೆಹಲಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಯತ್ನಾಳ್ ಬಣ ನಾವೇ ಅಧ್ಯಕ್ಷರಾಗ್ತೀವಿ ಅಂತಿದ್ದಾರೆ. ಇದೀಗ ದೆಹಲಿ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದ್ದು, ಕರ್ನಾಟಕ ಬಣ ಬಡಿದಾಟಕ್ಕೆ ಅಂತ್ಯವಾಡಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿಯೇ ಇಂದು ವಿಜಯೇಂದ್ರ ಹಾಗೂ ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಂಡಿದೆ.
ಈ ಬಗ್ಗೆ ಯತ್ನಾಳ್ ಮಾತನಾಡಿದ್ದು, ಏನು ಸಂಧಾನ ಇಲ್ರಿ. ಸಂಧಾನ ಆಗುವಂಥದ್ದು ಏನು ಇಲ್ಲ. ನಾವೂ ನಮ್ಮ ಪಕ್ಷದ ಹಿತ ದೃಷ್ಟಿಯಿಂದ, ಪಕ್ಷಕ್ಕೆ ಚೈತನ್ಯ ತುಂಬುವಂತಹ ಕೆಲಸ ಆಗಬೇಕು. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ 25 ಕ್ಷೇತ್ರಗಳನ್ನ ಗೆಲ್ಲಬೇಕಿತ್ತು. ಅವರು ಟೆನ್ಶನ್ ಆಗಿರೋದು ಗೊತ್ಯಿಲ್ಲ ನಾವೂ ರಾಷ್ಟ್ರೀಯ ಅಧ್ಯಕ್ಷರಿಗೆ ಮೆನ್ಶನ್ ಮಾಡೋದಕ್ಕೆ ಬಂದಿದ್ದೀನಿ. ಕಳೆದ ಬಾರಿಯಾಗಲಿ ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಕೇಳಿರಲಿಲ್ಲ. ಮೊನ್ನೆ ಬಂದಿದ್ದು ಯಾಕೆ ಅಂದ್ರೆ ಫೌಂಡೇಶನ್ ಹಾಕುವುದಕ್ಕೆ. ಬರೀ ನಾವೇ ಭೇಟಿಯಾಗೋದ್ರಿಂದ ರಾಷ್ಟ್ರೀಯ ನಾಯಕರಿಗೆ ಮುಜುಗರ ಆಗಬಾರದು. ಹೀಗಾಗಿ ಕಳೆದ ಬಾರಿ ಬಂದಾಗ ಸಂಸದರನ್ನಷ್ಟೇ ಭೇಟಿಯಾದ್ವಿ. ನಮ್ಮ ಪರವಾಗಿಯೇ ಬೆಂಬಲವಿದೆ.
ನೇರವಾಗಿ ಸೋಮಣ್ಣ ಅವರ ಮನೆಗೆ ಹೋಗ್ತೀವಿ, ಅಲ್ಲಿ ಒಂದೆರಡು ಗಂಟೆ ಇರ್ತೀವಿ. ಅಲ್ಲಿ ಚರ್ಚೆ ಏನಾದ್ರೂ ಆದ್ರೆ ಚರ್ಚೆ ಮಾಡ್ತೀವಿ, ನೇರವಾಗಿ ಏರ್ಪೋರ್ಟ್ ಹೋಗ್ತೀವಿ. ಈಗ್ಲೆ ಒಮ್ಮೆ ಮುಂದಿನದ್ದೆಲ್ಲ ಭವಿಷ್ಯವನ್ನು ಹೇಳಲ್ಲ. ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ರೆ ಅವಾಗ ಹೇಳ್ತೀವಿ. ನಾನು ಅದರ ಬಗ್ಗೆ ಏನು ರಿಯಾಕ್ಷನ್ ಕೊಡಲ್ಲ. ನಾವೂ ಅಷ್ಟೇ ಕಾನ್ಫಡೆಂಟ್ ಆಗಿದ್ದೀವಿ. ನಾವೇನು ಭಯಭೀತರಾಗಿಲ್ಲ. ನಮ್ಮ ಹೈಕಮಾಂಡ್ ಹೇಳಿದ ಮಾರು ಫೈನಲ್. ರಾತ್ರಿ ಕಂಡ ಬಾವಿಗೆ ಹಗಲು ಬೀಳಬೇಕೆಂದರೂ ಬೀಳ್ತೇವೆ. ನಮ್ಮ ಹೈಕಮಾಂಡ್ ನಾಯಕರು ಹಾಗೆ ಮಾಡಲ್ಲ. ವಿಶ್ವಾಸದ ಆಧಾರದ ಮೇಲೆ ನಾವೂ ಹೊರತು ಅಡ್ಜೆಸ್ಟ್ ಮೆಂಟ್ ಗಿರಾಕಿಗಳಲ್ಲ ಎಂದಿದ್ದಾರೆ.
ಸುದ್ದಿಒನ್ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ AI ಕ್ರಿಯಾ ಶೃಂಗಸಭೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ…
ಗುಬ್ಬಿ: ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಎಂಬ ಸಲ್ಲದ ಆರೋಪ ಮಾಡುವ ವಿರೋಧಪಕ್ಷ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಎಡಗಾಲಿನ ಮಂಡಿನೋವು ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದೆರಡು…
ಚಿತ್ರದುರ್ಗ. ಫೆ.11: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸುವ ಎಲ್‍ಇಡಿ ವಾಹನಕ್ಕೆ ಜಿಲ್ಲಾ ಗ್ಯಾರಂಟಿ…
ಚಿತ್ರದುರ್ಗ. ಫೆ.11: ದೇಶದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅಂತರ್ಜಾಲದಲ್ಲಿ ವಂಚನೆ ಮಾಡುವವರು ಕೂಡ ಹೆಚ್ಚಾಗುತ್ತಿದ್ದು, ಹೀಗಾಗಿ ಎಚ್ಚರ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…