ನವದೆಹಲಿ: ಪಂಜಾಬ್ ಚುನಾವಣಾ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನೀಡಿದ್ದ ಹೇಳಿಕೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ಅವರೆಲ್ಲ ಗುಂಪುಕಟ್ಟಿಕೊಂಡು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಹೌದು ನಾನು ವಿಶ್ವದ ಸಿಹಿ ಭಯೋತ್ಪಾದಕ. ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ರಸ್ತೆ, ನೀರು ಒದಗಿಸುವಂತ ಭಯೋತ್ಪಾದಕ ಎಂದಿದ್ದಾರೆ.
ಇದೇ ವೇಳೆ ಭಯೋತ್ಪಾದಕ ಎಂದವರಿಗೆ ಟಾಂಗ್ ಕೊಟ್ಟಿರುವ ಕೇಜ್ರಿವಾಲ್, ಅವರೆಲ್ಲ ಗುಂಪು ಕಟ್ಟಿಕೊಂಡು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಹಾಗೇ ಹೇಳುವುದೇ ನನಗೆ ನಗು ತರಿಸುತ್ತದೆ. ನಾನು ಭಯೋತ್ಪಾದಕ ಆಗಿದ್ದಲ್ಲಿ ಪ್ರಧಾನಿ ಮೋದಿ ನನ್ನನ್ನೇಕೆ ಬಂಧಿಸಿಲ್ಲ. ಎಲ್ಲರೂ ನನ್ನ ವಿರುದ್ಧವೇ ಇದ್ದಾರೆ. ಕೇಜ್ರಿವಾಲ್ ದೇಶವನ್ನು ಒಡೆಯಲು ಸಂಚು ರೂಪಿಸುತ್ತಿದ್ದಾರೆ, ಸ್ವತಂತ್ರ ರಾಷ್ಟ್ರದ ಪ್ರಧಾನಿಯಾಗುತ್ತಾರೆಂದು ಮಾತಾಡಿಕೊಳ್ಳುತ್ತಿದ್ದಾರೆ.
ಅವರ ಪ್ರಕಾರ ನಾನು ಭಯೋತ್ಪಾದಕ. ಹಾಗಾದ್ರೆ ಅವರ ಭದ್ರತಾ ಏಜೆನ್ಸಿಗಳು ಏನು ಮಾಡುತ್ತಿವೆ..? ಭಯೋತ್ಪಾದಕ ಪದದಲ್ಲಿ ಎರಡು ವಿಧಗಳಿವೆ. ಒಂದು ಜನರಲ್ಲಿ ಭೀತಿ ಹುಟ್ಟಿಸುತ್ತವೆ. ಮತ್ತೊಂದು ಭ್ರಷ್ಟರಲ್ಲಿ ಭಯ ಭಯ ಹುಟ್ಟಿಸುತ್ತವೆ ಎಂದಿದ್ದಾರೆ.