ಒಂದತ್ತು ನಿಮಿಷ ಉಸಿರಾಟ ನಿಂತರೇನೆ ತಡೆದುಕೊಳ್ಳುವುದಕ್ಕೆ ಆಗಲ್ಲ. ಇನ್ನು ಮೂರು ಗಂಟೆಗಳ ಕಾಲ ಉಸಿರಾಟ ನಿಂತರೆ ಇನ್ನೆಲ್ಲಿಯ ಬದುಕು. ಸದ್ಯ ಒಂದು ಮಗು ಪವಾಡವನ್ನೇ ಸೃಷ್ಟಿಸಿದೆ. ಮಗುವಿನ ಉಸಿರು ನಿಂತೇ ಹೋಗಿದೆ ಎನ್ನುವಷ್ಟರಲ್ಲಿ ಮಗು ಬದುಕಿ ಬಂದಿದೆ. ಇಂಥದ್ದೊಂದು ಘಟನೆ ನಡೆದಿರುವುದು ಕೆನಡಾ ನೈರುತ್ಯದ ಒಂಟಾರಿಯೊದಾ ಪೆಟ್ರೋಲಿಯಾದಲ್ಲಿ.
ವೇಲಾನ ಸೌಂಡರ್ಸ್ ಎಂಬ ಮಗುಗೆ ಒಂದು ವರ್ಷ ಎಂಟು ತಿಂಗಳು. ಹೋಮ್ ಡೇ ಕೇರ್ ನಲ್ಲಿ ಮಗುವನ್ನು ಬಿಡಲಾಗಿತ್ತು. ಆಟವಾಡುತ್ತಾ ಆಡುತ್ತಾ ಹೊರಾಂಗಣದ ಪೂಲ್ ಗೆ ಬಂದು ಬಿದ್ದಿದೆ. ನೀರಿಗೆ ಬಿದ್ದ ತಕ್ಷಣ ಮಗುವಿನ ಉಸಿರು ನಿಂತು ಹೋಗಿತ್ತು. ಅಲ್ಲಿಗೆ ತಕ್ಷಣ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕೆಂದು ಆಸ್ಪತ್ರೆಗೆ ಸೇರಿಸಿದರು.
ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯರು ಕೂಡ ಸುಮ್ಮನೆ ಕೂರಲಿಲ್ಲ. ನಾನಾ ಪ್ರಯತ್ನಗಳನ್ನು ಮಾಡಿದರು. ಮಗುವನ್ನು ಬದುಕಿಸುವುದಕ್ಕೆ ಪ್ರಯತ್ನ ಪಟ್ಟರು. ಆಸ್ಪತ್ರೆಯಲ್ಲಿ ಸಂಪನ್ಮೂಲ ಮತ್ತು ಸಿಬ್ಬಂದಿಗಳ ಕಪರತೆಯಿದ್ದರು, ಮಗುವಿನ ಜೀವ ಉಳಿಸಲು ನಾನಾ ಪ್ರಯತ್ನ ಮಾಡಿದರು. ಮಗುವಿನ ದೇಹ ಅದಾಗಲೇ ತಣ್ಣಗಾಗಿತ್ತು. ಆದರೂ ವೈದ್ಯರು ಸುಮ್ಮನಾಗದೆ ಚಿಕಿತ್ಸೆ ಮುಂದುವರೆಸಿದರು. ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ಕೊಟ್ಟ ಬಳಿಕ ಮಗು ಬದುಕಿ ಬಂದಿತ್ತು.