ಚಿತ್ರದುರ್ಗ(ಆ.09) : ಚಿತ್ರದುರ್ಗ ತಾಲೂಕು ಹಳವುದರ ಲಂಬಾಣಿ ಹಟ್ಟಿಯಲ್ಲಿ ಮಳೆಯಿಂದ ಹಾನಿಗೊಳಗಾಗಿ, ಮನೆ ಗೋಡೆ ಕುಸಿದು ಮಹಿಳೆ ಕಾಲಿಗೆ ಗಂಭೀರ ಗಾಯವಾದ ಘಟನೆ ಸಂಭವಿಸಿದೆ.
ಅಂಬಿಕಾ ಕೋಂ ಕುಮಾರ್ ನಾಯ್ಕ್ ತನ್ನ ಇಬ್ಬರ ಮಕ್ಕಳೊಂದಿಗೆ ಮಣ್ಣಿನ ಇಟ್ಟಿಗೆಯ ಮಾಳಿಗೆ ಮನೆಯಲ್ಲಿ ವಾಸವಾಗಿದ್ದರು. ಹೆಚ್ಚಿಗೆ ಸುರಿದ ಮಳೆಯಿಂದಾಗಿ ಮನೆಯ ಚಾವಣಿ ಹಾಗೂ ಗೋಡೆ ಕುಸಿದು, ಅಂಬಿಕಾ ಅವರ ಬಲ ಗಾಲಿಗೆ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆ ಭೇಟಿ ನೀಡಿದ ತಹಶೀಲ್ದಾರ್ ಸತ್ಯನಾರಾಯಣ ಚಿಕಿತ್ಸೆ ಪಡೆಯುತ್ತಿರುವ ಅಂಬಿಕಾ ಅವರ ಆರೋಗ್ಯ ವಿಚಾರಿಸಿದರು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಸೂಕ್ತ ನೆರವಿನ ಆಶ್ವಾಸನೆ ನೀಡಿದರು. ಬಿದ್ದ ಮನೆಗೆ ಪರಿಹಾರ ನೀಡಲಾಗುವುದು ಎಂದರು.