ಬಳ್ಳಾರಿ: ಗೃ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿದ್ದು, ಇಲಾಖೆಯಿಂದ ಬಂದಂತ ವಿಚಾರಗಳನ್ನು ತೆಗೆದುಕೊಂಡು ಹೇಳಬೇಕೆ ವಿನಃ ಬಲ್ಲ ಮೂಲಗಳಿಂದ ಬಂದಂತ ವಿಚಾರಗಳನ್ನು ಇಟ್ಟುಕೊಂಡು ಹೇಳುವುದಲ್ಲ. ಬಲ್ಲ ಮೂಲಗಳು ಯಾವುದು ಅಂತ ಇವತ್ತಿಗೂ ಸಹ ಅವರು ಹೇಳುವುದಕ್ಕೆ ಆಗುತ್ತಿಲ್ಲ. ಗೃಹಮಂತ್ರಿಗಳಾದಾಗಿನಿಂದಲೂ ಸಹ ಮೈಸೂರಲ್ಲಿ ಅತ್ಯಾಚಾರ ಪ್ರಕರಣ, ಹರ್ಷ ಕೊಲೆ, ಬೆಂಗಳೂರಿನಲ್ಲಿ ನಡೆದಂತ ಚಂದ್ರು ಕೊಲೆ ಎಲ್ಲಾ ಘಟನೆಗೂ ಸಹ ಕೋಮು ಬಣ್ಣ ಕೊಡುತ್ತಿದ್ದಾರೆ. ಇದನ್ನು ನೋಡಿದಾಗ ಮರ್ಕಟ ದಳದವರು ಎಂಬಂತೆ ಕಾಣುತ್ತದೆ.
ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬೇಕು, ಸಂವಿಧಾನದ ಚೌಕಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬೇಕಹ ಎಂಬುದು ಗೊತ್ತಿಲ್ಲ. ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಮಾಡಿದ್ದಾರೆ. ಆದರೆ ಈಗ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಗಿದೆ. ಜನ ಭಯಭೀತರಾಗಿದ್ದಾರೆ. ಎಲ್ಲಾ ವಿಚಾರದಲ್ಲೂ ಕೋಮು ದ್ವೇಷ ಹೇಳಿಕೆ ಕೊಡುವುದು ಸರಿಯಲ್ಲ. ಗೃಹಮಂತ್ರಿಗಳು ರಾಜೀನಾಮೆ ಕೊಡಬೇಕು ಎಂಬುದನ್ನು ಆಗ್ರಹಿಸಿ ಎಲ್ಲಾ ಜಿಲ್ಲೆಗಳಲ್ಲೂ ದೂರು ದಾಖಲಾಗುತ್ತಿದೆ ಎಂದಿದ್ದಾರೆ.
ಹಿಜಾಬ್ ವಿಚಾರ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಹಿಜಾಬ್ ವಿಚಾರ ಅಲ್ಲ ಅದು. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚನೆ ಮಾಡಿಸಬೇಕೆಂಬ ಉದ್ದೇಶದಿಂದ ಮಾಡಿರುವ ಕೆಲಸವದು. ಉತ್ತರ ಭಾರತಕ್ಕೆ ಹೋದರೆ ಎಲ್ಲಾ ಹಿಂದೂಗಳು ಹಾಕಿಕೊಂಡಿರುತ್ತಾರೆ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ ಗಂಡ ಸತ್ತವ ವಿಧವೆಯರಿರುತ್ತಾರಲ್ಲ ಅವರಿಗೆ ತಲೆ ಬೋಳಿಸಿ ತಲೆಮೇಲೆ ಸೆರಗು ಹಾಕುತ್ತಾರೆ. ಅದರ ವಿರುದ್ಧ ಹೋರಾಟ ಮಾಡಿ ಎಂದಿದ್ದಾರೆ.