ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಸ್ಥಾನ ತ್ಯಜಿಸಲಿದ್ದಾರೆ, ಮತ್ತೆ ಬೇರೆಯವರು ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಓಡಾಡುತ್ತಿವೆ. ಈ ಸಂಬಂಧ ಮಾತನಾಡಿರುವ ಶಾಸಕ ಬಸನಗೌಡ ಯತ್ನಾಳ್, ಬೊಮ್ಮಾಯಿ ಅವರು ಸಿಎಂ ಆಗಿ ಇನ್ನು 100 ದಿನಗಳಷ್ಟೇ ಆಗಿದೆ. ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಕಾಂಗ್ರೆಸ್ ನವರು ಹಬ್ಬಿಸ್ತಿರೋ ಸುದ್ದಿ. ಎಂದಿದ್ದಾರೆ.
ಪರಿಷತ್ ಫಲಿತಾಂಶ ಬಂದ ಮೇಲೆ ಸಚಿವ ಸಂಪುಟ ಭಾರೀ ಬದಲಾವಣೆ ಆಗುತ್ತೆ ಅಂತ ಹೇಳಿದ್ದೆ. ಮುಂದೆ ಆಗುತ್ತೆ ನೋಡಿ ಎಂದಿದ್ದಾರೆ. ಇದೆ ವೇಳೆ ಬಿಎಸ್ವೈ ಪುತ್ರನಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿ, ಮಕ್ಕಳು, ಮರಿ ಮಕ್ಕಳೇ ಆಗ್ಬಿಟ್ರೆ ಪಾರ್ಟಿ ಏನಾಗ್ಬೇಕು. ಕುಟುಂಬದವರೆಲ್ಲ ಎಂಪಿ, ಎಂಎಲ್ಎ ಆಗ್ಬಿಟ್ರೆ ದೇವೇಗೌಡರ ಕುಟುಂಬವಾಗಿ ಬಿಡುತ್ತೆ ಎಂದಿದ್ದಾರೆ.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ನಡೆಯಲ್ಲ. ನಿಷ್ಕ್ರೀಯ ಸಚಿವರನ್ನೆಲ್ಲಾ ಬದಲಾವಣೆ ಮಾಡಬೇಕು. ಒಂದು ವೇಳೆ ನಾನು ಸಿಎಂ ಆದ್ರೆ ರಾಜ್ಯದ ಇತಿಹಾಸವನ್ನೇ ಬದಲಾಯಿಸುತ್ತೀನಿ ಎನ್ನುವ ಮೂಲಕ ಶಾಸಕ ಯತ್ನಾಳ್ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.