ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿತ್ತು. ಹೀಗಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿದ್ದವು. ಬಳಿಕ ಬೇಸಿಗೆಯ ಕಾಲಕ್ಕೆ ಒಂದಷ್ಟು ನೀರು ಖರ್ಚಾಗಿದೆ. ಈಗ ಮತ್ತೆ ಮಳೆಯಾಗುತ್ತಿದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದನ್ನ ನೋಡೋಣಾ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಈ ಬಾರಿ ಮೂರನೇ ಬಾರಿಗೆ ಕೋಡಿ ಬಿದ್ದಿತ್ತು. ಬಾಗಿನ ಅರ್ಪಿಸಿ ಜಿಲ್ಲೆಯ ಜನ ಎಂಜಾಯ್ ಕೂಡ ಮಾಡಿದ್ದರು. ವಾಣಿವಿಲಾಸ ಸಾಗರದ ಇಂದಿನ ನೀರಿನ ಮಟ್ಟವನ್ನು ನೋಡುವುದಾದರೆ, ಗರಿಷ್ಠ ನೀರಿನ ಮಟ್ಟ 2140 ಅಡಿ ಅಂದ್ರೆ 30.42 ಟಿಎಂಸಿ. ಇಂದಿನ ನೀರಿನ ಮಟ್ಟ 2137.15 ಅಡಿ ಅಂದರೆ 38.01 ಟಿಎಂಸಿ ನೀರು ಇದೆ. ಒಳಹರಿವು 0 ಕ್ಯೂಸೆಕ್ ಒದೆ. ಹೊರ ಹರಿವು 145 ಕ್ಯೂಸೆಕ್ ಇದೆ.
ಭದ್ರಾ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2158 ಅಡಿ ಅಂದ್ರೆ 71.54 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 2125.64 ಅಡಿ ಅಂದ್ರೆ 37.28 ಟಿಎಂಸಿ ಇದೆ. ಒಳಹರಿವು 128 ಕ್ಯೂಸೆಕ್ಸ್ ಇದ್ರೆ, 5220 ಕ್ಯೂಸೆಕ್ಸ್ ಹೊರ ಹರಿವು ಇದೆ.
ಇ‌್ನು ತುಂಗಾ ಭದ್ರಾ ಜಲಾಶಯದ ನೀರಿನ ಮಟ್ಟವನ್ನು ನೋಡುವುದಾದರೆ, ಗರಿಷ್ಠ ನೀರಿನ ಮಟ್ಟ ಬಂ್ಉ 1633 ಅಡಿ ಅಂದ್ರೆ 105.79 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ನೀರಿನ ಮಟ್ಟ 1584.86 ಅಡಿ ಇದೆ. ಅಂದ್ರೆ 7.23 ಟಿಎಂಸಿ ನೀರಿದೆ. ಒಳಹರಿವು 0 ಆಗಿದ್ದು, ಹೊರ ಹರಿವು 4729 ಕ್ಯೂಸೆಕ್ಸ್ ಇದೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ. 12…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏಪ್ರಿಲ್. 12…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಚಿತ್ರದುರ್ಗ ಏ. 12…
ಬೆಂಗಳೂರು; ಕಳೆದ ಕೆಲವು ವರ್ಷಗಳಿಂದಾನೂ ಡಿಜಿಟಲ್ ಪೇಮೆಂಟ್ ಅನ್ನೇ ಜನ ಅನುಸರಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯವಹಾರಕ್ಕೂ ಜನರ ಬಳಿ ಕ್ಯಾಶ್…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 : ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀಗುರು ಕೊಟ್ರ ಸ್ವಾಮಿ ರಥೋತ್ಸವ ಏಪ್ರಿಲ್ 15…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ.…