ರಾಮನಗರ: ಚನ್ನಪಟ್ಟಣ, ರಾಮನಗರದ ಜನತೆ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಅವರು, ನನಗೆ ಇವತ್ತು ನಂಬಿಕೆ ಇದೆ. ಚನ್ನಪಟ್ಟಣ, ರಾಮನಗರ ಇರಬಹುದು. ಆದರೆ ಕನಕಪುರದಲ್ಲಿ ನಂದೆ ತಪ್ಪು ಇರುವುದು ಇರಬಹುದು. ಕಾಂಗ್ರೆಸ್ ಜೊತೆ ಕೈಜೋಡಿಸಿ ತಪ್ಪು ಮಾಡಿದೆ. ಅಲ್ಲಿನ ಜನರಿಗೆ ಏನಾದ್ರೂ ಕೆಲಸ ಮಾಡ್ಬೇಕು ಅಂತ ಒದ್ದಾಡುತ್ತಾ ಇದ್ದೀನಿ. ರಾಮನಗರ ಜಿಲ್ಲೆಯಲ್ಲಿ ತಾಯಿ ಮಕ್ಕಳ ಸಂಬಂಧ ಏನಿದೆ ಅದೇ ಸಂಬಂಧ ದೇವೇಗೌಡರ ಕುಟುಂಕ್ಕೂ ರಾಮನಗರ ಕುಟುಂಬಕ್ಕೂ ಇರುವುದು. ತಾಯಿ ಯಾವುದೇ ಕಾರಣಕ್ಕೂ ಮಗನಿಗೆ ವಿಷ ಹಾಕಲ್ಲ, ಮಗನ ಕುತ್ತಿಗೆ ಕುಯ್ಯಲ್ಲ ಅನ್ನೋದು 100% ಗೊತ್ತು.
ಪ್ರತಿ ಸಮಯದಲ್ಲೂ ಸೂಕ್ತವಾದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದೀನಿ. ಕೆಲವು ಸಮಸ್ಯೆಗಳನ್ನು ಹೊರಗಡೆ ಹೇಳುವುದಕ್ಕೆ ಆಗಲ್ಲ. 2008ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲ್ಕಬೇಕಿತ್ತು. ಸೋತಿದ್ದು ಕೇವಲ ಮೂರು ಸಾವಿರ ಮತದಲ್ಲಿ. ಕೆಲವರು ಮಾಡುವ ಅವಾಂತರವಿದು.
ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ನನಗೆ ಈ ಬಗ್ಗೆ ವಿಚಾರವೇ ಗೊತ್ತಿಲ್ಲ. ನನ್ನ ಗಮನ ಕ್ಷೇತ್ರದ ಅಭಿವೃದ್ಧಿ ಕಡೆಗೆ ಅಷ್ಟೆ ಗಮನಕೊಟ್ಟಿದ್ದೇನೆ. ನನ್ನ ಮಾತನ್ನು ಕೇಳುತ್ತಾರೆ ಎಂವುದರಲ್ಲಿ ಏನು ಅರ್ಥ. ಏನಾಗಿದೆ ಅನ್ನೋದೆ ನಂಗೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಶೋಭಾ ಯಾತ್ರೆಯಲ್ಲಿ ಕೇಸರಿಮಯದ ಬಗ್ಗೆ ಉತ್ತರಿಸಿದ ಅವರು, ನೋಡಿ ಅವರು ಯಾವ ಮಯವನ್ನಾದರೂ ಮಾಡಲಿ. ಅದು ಅವರಿಗೆ ಸಂಬಂಧಿಸಿದ್ದು. ಯಾವ ಯಾತ್ರೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಯಾರಿಗೆ ಶೋಭೆ ತರಲು ಗೊತ್ತಿಲ್ಲ. ಎಲ್ಲಾ ಕಡೆ ನಡೆಯುತ್ತಿದೆ. ಯಾತ್ರೆಗಳನ್ನ ಬಹಳ ಚೆನ್ನಾಗಿ ನಡೆಸುತ್ತಿದ್ದಾರೆ. ರೈತರ ಭೂಮಿಯೊಳಗೆ ಕಷ್ಟಪಟ್ಟು ಸಂಪಾದನೆ ಮಾಡಿದ್ದಕ್ಕೆ ಬೆಲೆ ಕೊಡೋದಕ್ಕೆ ಆಗಲಿಲ್ಲ. ಬೆಲೆ ಏರಿಕೆ ಹೋಗ್ತಾ ಇದೆ. ಅಡುಗೆ ಎಣ್ಣೆ ಏರುತ್ತಿದೆ, ಗೊಬ್ಬರ ಸಿಗ್ತಾ ಇಲ್ಲ. ಅದಕ್ಕೆ ಮಾಡ್ರಪ್ಪ ಶೋಭಯಾತ್ರೆಯನ್ನ. ದೇಶದಲ್ಲಿ ಯಾರು ಮಾಡದೆ ಇರುವ ಕೆಲಸ ಮಾಡಿದ್ದೀವಿ ಅಂತ ಎಂದು ಬಿಜೆಪಿ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.