ಬೆಂಗಳೂರು: ಚುನಾವಣೆ ಇನ್ನು ದೂರ ಇರುವಾಗ್ಲೇ ಸ್ಪರ್ಧೆ ವಿಚಾರ ಬಾರೀ ಸದ್ದು ಮಾಡ್ತಿದೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಪರ್ಧೆ ವಿಚಾರವಂತೂ ಯಾವಾಗಲೂ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಅವರು ಎಲ್ಲಿ ನಿಲ್ತಾರೆ ಅನ್ನೋದೆ ಎಲ್ಲರ ಪ್ರಶ್ನೆಯಾಗಿದೆ. ಆದ್ರೆ ಈ ಬಾರಿ ಅವರು ಬಾದಾಮಿ ಕ್ಷೇತ್ರದಲ್ಲಿ ನಿಲ್ಲುವುದು ಬಹುತೇಕ ಖಚಿತವಾದಂತಿದೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರು ಕೂಡ ಹೇಳಿದ್ರು ಎಲ್ಲಾ ಕಡೆ ನಮಗೆ ಒತ್ತಡ ಬರ್ತಾ ಇದೆ. ನಮ್ಮ ಕ್ಷೇತ್ರಕ್ಕೆ ಬನ್ನಿ ನಮ್ಮ ಕ್ಷೇತ್ರಕ್ಕೆ ಬನ್ನಿ ಅಂತಿದ್ದಾರೆ. ಹಾವೇರಿ, ಕೊಪ್ಪಳ, ಕೋಲಾರ, ಚಾಮರಾಜಪೇಟೆ ಹೀಗೆ ಎಲ್ಲಾ ಕಡೆಯಲ್ಲೂ ಇಲ್ಲಿಂದಲೇ ಸ್ಪರ್ಧಿಸಿ ಅಂತಿದ್ದಾರೆ. ಆದ್ರೆ ನಾನಿನ್ನು ತೀರ್ಮಾನ ಮಾಡಿಲ್ಲ ಎಂದೇ ಹೇಳುತ್ತಿದ್ದರು. ಇದೀಗ ಅವರು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಸಿದ್ದರಾಮಯ್ಯ ಆಪ್ತರಾಗಿರುವ ಜಮೀರ್ ಅಹ್ಮದ್ ಬಾರೀ ಒತ್ತಡ ಹಾಕಿದ್ದರು. ಚಾಮರಾಜಪೇಟೆಯಿಂದಲೇ ಸ್ಪರ್ಧಿಸಿ ಎಂದಿದ್ದರು. ಇದೀಗ ಆ ಕ್ಷೇತ್ರ ಬೇಡ ಎಂದು ಸಿದ್ದರಾಮಯ್ಯ ಅವರೇ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಸ್ಪರ್ಧಿಸಿದ್ರೆ ಹಿಂದೂ ಮುಸ್ಲಿಂ ಗೊಂದಲ ಶುರುವಾಗಬಹುದು ಎಂಬ ಅಭಿಪ್ರಾಯವಾಗಿದೆ. ಹೀಗಾಗಿ ಬಾದಾಮಿ ಕಡೆ ಸಿದ್ದರಾಮಯ್ಯ ಅವರ ಚಿತ್ತ ನೆಟ್ಟಿದೆ ಎನ್ನಲಾಗಿದೆ.