ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ಟ್ರೆಂಡ್ ಕ್ರಿಯೇಟ್ ಆಗ್ತಾ ಇರುತ್ತವೆ. ಆ ಟ್ರೆಂಡ್ ಬಿರುಗಾಳಿ ಬೀಸಿದಂತೆ ಹಬ್ಬಿ ಬಿಡುತ್ತದೆ. ಈಗ ಘಿಬ್ಲಿ ಫೋಟೋ ಆಗಿದ್ಯಲ್ಲ ಹಾಗೇ. ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ನಂದು ಒಂದು ಇರಲಿ ಎಂಬ ರೇಂಜಿಗೆ ಜನ ಘಿಬ್ಲಿ ಫೋಟೋಗಳನ್ನ ಅಪ್ಲೋಡ್ ಮಾಡ್ತಾ ಇದಾರೆ. ಸೈಬರ್ ಅಪರಾಧಗಳು ಹೆಚ್ಚಾಗಿರುವ ಈ ಕಾಲಕ್ಕೆ ಈ ಘಿಬ್ಲಿ ಫೋಟೋ ಕ್ರಿಯೇಟ್ ಮಾಡೋ ಅಪ್ಲಿಕೇಷನ್ ಎಷ್ಟು ಸೇಫ್ ಅನ್ನೋದು ಮಾತ್ರ ಸದ್ಯದ ಚರ್ಚಾ ವಿಷಯವಾಗಿದೆ.
ಘಿಬ್ಲಿ ಫೋಟೋವನ್ನು GPT4 ನಿಂದ ಮಾಡ್ತಾ ಇದಾರೆ. AI ಅಪ್ಲಿಕೇಶನ್ ಗೆ ಫೋಟೋಗಳನ್ನು ಅಪ್ಲೋಡ್ ಮಾಡ್ತಾ ಇರೋದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆಯೇ ಸರಿ ಎನ್ನುತ್ತಿದ್ದಾರೆ ಸೈಬರ್ ಎಕ್ಸ್ ಪರ್ಟ್ ಗಳು. ಆನ್ಲೈನ್ ಆಪ್ ಗಳಿಗೆ ಫೋಟೋ ಅಪ್ಲೋಡ್ ಮಾಡುವುದರಿಂದ ಸ್ಕ್ಯಾಮ್ ಮಾಡಿಬಿಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಅದು ಯಾವ ರೀತಿಯಲ್ಲಿ ಡೇಂಜರ್ ಅನ್ನೋದನ್ನು ತಜ್ಞರು ಹೇಳಿದ್ದಾರೆ ನೋಡಿ.
ಮೊದಲಿಗೆ ಘಿಬ್ಲಿ ಫೋಟೋ ಬೇಕು ಅಂದ್ರೆ ಚಾಟ್ ಬಾಕ್ಸ್ ನಲ್ಲಿ ಫೋಟೋ ಅಪ್ಲೋಡ್ ಮಾಡಬೇಕು. ಕೆಲ ಆ್ಯಪ್ ಗಳು ಸೈನ್ ಅಪ್ ಕೇಳುತ್ತವೆ. ಆಗ ನಿಮ್ಮ ಲಾಗಿನ್ ಸುಲಭವಾಗಿ ಆಪ್ ಹ್ಯಾಂಡಲ್ ಮಾಡುವವರಿಗೆ ಸಿಗುತ್ತದೆ. ಬಳಿಕ ಓಪನ್ ಎಐ ಅನುಮತಿ ನೀಡುತ್ತೆ. ಆಗ ಗ್ಯಾಲರಿಯಲ್ಲಿ ಫೋಟೋ ಆಯ್ಕೆ ಮಾಡಿಕೊಳ್ಳುವ ಆಪ್ಶನ್ ಕೊಟ್ಟಿರುತ್ತೀರಾ. ಇದರಿಂದ ಪರ್ಸನಲ್ ಡೇಟಾ, ಪರ್ಸನಲ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಸುಮಾರು ಜನ ಇದರಿಂದ ಪರಿಣಾಮ ಅನುಭವಿಸಿದ್ದಾರೆ. ಹೀಗಾಗಿ ಘಿಬ್ಲಿ ಟ್ರೆಂಡ್ ಮೊರೆ ಹೋಗುವ ಮುನ್ನ ಎಚ್ಚರದಿಂದ ಇರಿ.
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.09 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ…
ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯ ತೂಗುಗತ್ತಿಯಲ್ಲಿಯೇ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇದೀಗ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಆರೋಪ ಕೇಳಿ…
ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ, ಬಯಸಿದ್ದೆಲ್ಲಾ ಪಡೆದೇ ಪಡುತ್ತಾರೆ, ಈ ರಾಶಿಯವರು ಮದುವೆ ವಿಚಾರಕ್ಕೆ ತಂದೆ ತಾಯಿಂದ ಪ್ರತಿರೋಧ, ಬುಧವಾರದ…
ದಾವಣಗೆರೆ; ಇಂದು ದ್ವಿತೀಯ ಪಿಯು ಫಲಿತಾಂಶವನ್ನು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಮಕ್ಕಳು ಫೇಲ್…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಹಾಗೂ ಛಾಯಾಗ್ರಾಹಕ ಶಂಕರ್ ಇವರ ತಾಯಿ ಲಕ್ಷ್ಮಮ್ಮ…
ಚಳ್ಳಕೆರೆ, ಏಪ್ರಿಲ್. 08 : 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಪ್ರತಿ ವರ್ಷದ ಹಾಗೆ ಈ ಬಾರಿಯೂ…