ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ ಮೂರನೇ ಆರೋಪಿಯಾಗಿದ್ದಾರೆ. ಚೈತ್ರಾ ಕುಂದಾಪುರ ಅರೆಸ್ಟ್ ಆದಾಗಿಂದ ತಲೆಮರೆಸಿಕೊಂಡಿದ್ದ ಸ್ವಾಮೀಜಿ ಇಂದು ಓಡಿಶಾದಲ್ಲಿ ಅರೆಸ್ಟ್ ಆಗಿದ್ದಾರೆ. ಸ್ವಾಮೀಜಿಯನ್ನು ಸಿಸಿಬಿಯವರು ಬಂಧಿಸಿದ್ದೆ ಒಂದು ರೋಚಕ.
ಈ ತಿಂಗಳ 11ರಂದೇ ಸ್ವಾಮೀಜಿ ತಮ್ಮ ಡ್ರೈವರ್ ಜೊತೆಗೆ ಹೀರೇಹಡಗಲಿಯಿಂದ ಮೈಸೂರಿಗೆ ತೆರಳಿದ್ದರು. ಎರಡು ದಿನ ಬಿಟ್ಟು ಅಲ್ಲಿನ ಅಪೂರ್ವ ಮೊಬೈಲ್ ಸ್ಟೋರ್ ನಲ್ಲಿ ನಾಲ್ಕು ಸಿಮ್ ಹಾಗೂ ನಾಲ್ಕು ಮೊಬೈಲ್ ಗಳನ್ನು ಖರೀದಿ ಮಾಡಿದ್ದಾರೆ. ಅದಾದ ನಂತರ ತನ್ನ ಡ್ರೈವರ್ ಲಿಂಗರಾಜು ಕಡೆಯಿಂದ 50 ಲಕ್ಷ ಹಣ ತರಿಸಿ, ಪ್ರಣವ್ ಗೆ ನೀಡಿದ್ದಾರೆ. ಅಂದು ಅಲ್ಲಿಯೇ ತಂಗಿದ್ದು, ಕಾರಿನ ನಂಬರ್ ಪ್ಲೇಟ್ ಕೂಡ ಬದಲಾಯಿಸಿದ್ದಾರೆ. ಬಳಿಕ ಮೈಸೂರಿನಿಂದ ಹೈದರಾಬಾದ್ ಗೆ ಎಸ್ಕೇಪ್ ಆಗಿದ್ದಾರೆ.
ಈ ಕಡೆ ಸ್ವಾಮೀಜಿಯ ಡ್ರೈವರ್ ಬಂಧನವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ, ಸ್ವಾಮೀಜಿ ಶ್ರೀಶೈಲಕ್ಕೆ ಎಸ್ಕೇಪ್ ಆಗಿದ್ದಾರೆ. ತನ್ಮ ಪ್ರಯಾಣ ಮುಂದುವರೆಸಿದ್ದು ಪೂರಿ, ಗಂಜಾಂ, ಕಟಕ್ ಅಂತ ಪಯಣ ಬೆಳೆಸುವಾಗಲೇ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.