ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರುಗಳ ಕುರುಹು ಸಿಕ್ಕಿದ್ದು, ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಎರಡು ಕಡೆ ವಾದ ವಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಿದ್ದು, ಶಿವಲಿಂಗ ಪತ್ತೆಯಾದ ಜಾಗಕ್ಕೆ ರಕ್ಷಣೆ ನೀಡಲು ಡಿಸಿಗೆ ಸೂಚನೆ ನೀಡಿದೆ. ಪ್ರಾರ್ಥನೆ ಸಲ್ಲಿಸಬಹುದು ಎಂಬುದನ್ನು ತಿಳಿಸಿದೆ.
ಅದಕ್ಕೂ ಮುನ್ನ ಅಡ್ವೋಕೇಟ್ – ಕಮಿಷನರ್ ಅಜಯ್ ಮಿಶ್ರಾ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ತಂಡ ರಚನೆ ಮಾಡಿತ್ತು ಆ ತಂಡದಲ್ಲಿ ಅಜಯ್ ಮಿಶ್ರಾ ಕೂಡ ಇದ್ದರು. ಆದರೆ ಸಮೀಕ್ಷೆಯ ಮಾಹಿತಿ ಸೋರಿಕೆಯಾದ ಆರೋಪದ ಮೇಲೆ ಕೋರ್ಟ್ ಅವರನ್ನು ವಜಾ ಮಾಡಲಾಗಿದೆ.
ಕೋರ್ಟ್ ನೇಮಿಸಿದ್ದ ಆಯೋಗವು ವರದಿ ಸಲ್ಲಿಸಲು ಕಾಲಾವಕಾಶ ಕೇಳಿತ್ತು. ಈ ಸಂಬಂಧ ಸಹಾಯಕ ನ್ಯಾಯಾಲಯದ ಕಮಿಷನರ್, ಅಜಯ್ ಪ್ರತಾಪ್ ಸಿಂಗ್ ಈ ಬಗ್ಗೆ ಮಾತನಾಡಿ, ಮೇ 14-16ರಿಂದ ಮೂರು ದಿನಗಳ ಕಾಲ ಸಮೀಕ್ಷೆ ನಡೆದಿದೆ. ಕೇವಲ 50 ಪ್ರತಿಶತದಷ್ಟು ವರದಿ ಸಿದ್ಧವಾಗಿದೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ನಾವು ಅದನ್ನು ಮೊದಲು ನೀಡಲು ಸಾಧ್ಯವಾಗುವುದಿಲ್ಲ. ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಸಾಧ್ಯವಾಗುವುದಿಲ್ಲ ಎಂದು ಕಾಲಾವಕಾಶ ಕೇಳಿದ್ದಾರೆ.
ಅಷ್ಟೇ ಅಲ್ಲ ಈ ಹಿಂದೆ ಸಕಾಲದಲ್ಲಿ ವರದಿ ಸಲ್ಲಿಸುತ್ತೇವೆ ಎಂದು ನ್ಯಾಯಾಲಯದ ಮುಂದೆ ಹೇಳಿದ್ದ ವಿಶೇಷ ಆಯುಕ್ತ ವಕೀಲ ವಿಶಾಲ್ ಸಿಂಗ್, ಈ ವಿಷಯದ ಬಗ್ಗೆ ಆಯೋಗದ ವರದಿ ತಯಾರಿಸಲು ಎರಡು ಮೂರು ದಿನ ಸಮಾಯವಕಾಶ ಕೇಳಿದ್ದಾರೆ.