ಅಹಮದಾಬಾದ್ : ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನಿನ್ನೆ(ಭಾನುವಾರ) ಸಂಜೆ ಕುಸಿದು ಬಿದ್ದು 130 ಮಂದಿ ಸಾವನ್ನಪ್ಪಿದ್ದರು. ಇದುವರೆಗೆ ಸುಮಾರು 177 ಮಂದಿಯನ್ನು ರಕ್ಷಿಸಲಾಗಿದ್ದು, ಹಲವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ರಾಜಧಾನಿ – ಅಹಮದಾಬಾದ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಮಚ್ಚು ನದಿಯ ತೂಗು ಸೇತುವೆಯು ಭಾನುವಾರ ಸಂಜೆ 6.42 ಕ್ಕೆ ಕುಸಿದು ಬಿದ್ದಿದೆ, ಸುಮಾರು 500 ಜನರು ಛತ್ ಪೂಜೆಗಾಗಿ ಅದರ ಮೇಲೆ ನಿಂತಿದ್ದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಐದು ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಪಡೆಗಳು ಕೂಡ ಕಾರ್ಯಾಚರಣೆ ಆಗಮಿಸಲಿವೆ.