ಸುದ್ದಿಒನ್, ಚಿತ್ರದುರ್ಗ, (ಅ.21) : ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಆರ್. ನರೇಂದ್ರಬಾಬು ಅವರು ಗುಲ್ಲಾ ಓಂಕಾರಪ್ಪ ಅವರಿಂದ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸದ ಹಣ ಖಾತೆಗಳಿಗೆ ಜಮಾ ಮಾಡುವ ವಿಚಾರಕ್ಕೆ ಲಂಚ ಪಡೆದ ಆರೋಪಕ್ಕೆ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಓಂಕಾರಪ್ಪ ವಿ.ವಿ.ಪುರ ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಆರ್. ನರೇಂದ್ರಬಾಬು ಅವರನ್ನು ಭೇಟಿ ಮಾಡಿ ಕೂಲಿ ಕೆಲಸದ ಹಣ ತಮ್ಮ ಖಾತೆಗಳಿಗೆ ಜಮಾ ಆಗಿರುವುದಿಲ್ಲ ಎಂದು ಕೇಳಿದ್ದು, ನಿಮ್ಮ ಖಾತೆಗೆ ಕೂಲಿ ಕೆಲಸ ಜಮಾ ಆಗಲು ಪಿ.ಡಿ.ಓ.ರವರು ಥಂಬ್ ನೀಡಬೇಕು. ನೀವು ಹಣವನ್ನು ಕೊಡದೆ ಅವರು ಥಂಬ್ ನೀಡುವುದಿಲ್ಲ.
ನೀವು ಪಿ.ಡಿ.ಓ.ರವರಿಗೆ ನೀಡಬೇಕಾದ ಹಣವನ್ನು ನನಗೆ ಕೊಡಿ, ಇಂಜಿನಿಯರ್‌ರವರಿಗೆ ನೀಡಬೇಕಾದ ಹಣವನ್ನು ಅವರಿಗೇ ಕೊಡಿ, ಬೇರೆಯವರೆಲ್ಲ ಒಂದು ಲಕ್ಷಕ್ಕೆ ಐದು ಸಾವಿರ ನೀಡಿದ್ದಾರೆ. ಸಾಹೇಬರಿಗೆ ಕೊಡಬೇಕಾದ ಆ ಹಣವನ್ನು ನನಗೆ ಕೊಡಿ ಎಂದು ರೂ.5000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಕಾರಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ. ಈ ದೂರಿನನ್ವಯ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಕಾರ್ಯಾಚರಣೆಯನ್ನು ಜಯಪ್ರಕಾಶ್, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹದಳ, ಪೂರ್ವ ವಲಯ, ದಾವಣಗೆರೆ ಇವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿರುತ್ತದೆ.ಈ ಸಂದರ್ಭದಲ್ಲಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಡಿ.ವೈ.ಎಸ್.ಪಿ , ಬಸವರಾಜ ಆರ್. ಮಗದುಮ್, ಪೊಲೀಸ್ ನಿರೀಕ್ಷಕ ಹಸನ್‌ಸಾಬ್, ಪ್ರವೀಣ್ ಕುಮಾರ್, ಮತ್ತು ಸಿಬ್ಬಂದಿಗಳಾದ ಮಾರುತಿರಾಂ ಹೆಚ್.ಸಿ., ಓಬಣ್ಣ, ಹೆಚ್.ಸಿ.. ಹರೀಶ್ ಕುಮಾರ್, ಹೆಚ್.ಸಿ. ಹಾಗೂ ಫಕ್ರುದ್ದೀನ್, ಪಿ.ಸಿ. ಯತಿರಾಜ, ಪಿ.ಸಿ., ಫಯಾಜ್, ಪಿ.ಸಿ. ಹಾಜರಿದ್ದರು.