ತುಮಕೂರು: ಇಂದು ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್, ಸಿಂಧಗಿಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದೆ.ಬಿಜೆಪಿ ಗೆಲಯವಿನ ಬಗ್ಗೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ಸಂದರ್ಭದಲ್ಲೂ ಬಿಜೆಪಿಗೆ 30 ಸಾವಿರ ಲೀಡ್ ಸಿಕ್ಕಿರುವುದು ಆಶ್ಚರ್ಯ ತಂದಿದೆ. ಪೆಟ್ರೋಲ್ ಡಿಸೇಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ರು, ಇನ್ನು ಅವರಿಗೆ ಮತ ಹಾಕಿ ಗೆಲ್ಲಿಸಿರುವುದು ಆಶ್ಚರ್ಯ ಎನಿಸಿದೆ. ಇವತ್ತಿನ ಫಲಿತಾಂಶ ನೋಡಿದ್ರೆ ಬೆಲೆ ಏರಿಕೆಗೆ ಅರ್ಥವಿಲ್ಲ ಎನಿಸುತ್ತಿದೆ.
ಸಿಂದಗಿಯಲ್ಲಿ ನಮ್ಮ ಪಕ್ಷ ಅಷ್ಟೊಂದು ಮತ ಸೆಳೆಯಲು ಆಗಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನ ಪರಿಶೀಲನೆ ಮಾಡಲಾಗುವುದು. ಹಾನಗಲ್ ಸಿಎಂ ಅವರ ತವರು ಜಿಲ್ಲೆ. ಅಲ್ಲಿ ನಾವೂ ಗೆದ್ದಿರುವುದು ಸಂತಸ ತಂದಿದೆ. ಶ್ರೀನಿವಾಸ್ ಮಾನೆ ಅವರ ಕ್ಷೇತ್ರದಲ್ಲೇ ಜನರ ನಡಿವೆ ಇದ್ದು, ಅಭಿವೃದ್ಧಿ ಕೆಲಸ ಮಾಡಿಕೊಂಡಿದ್ದರು. ಹೀಗಾಗಿ ಜನರು ಅವರ ಕೈ ಹಿಡಿದಿದ್ದಾರೆ ಎಂದಿದ್ದಾರೆ.
ಇನ್ನು ಜೆಡಿಎಸ್ ಬಗ್ಗೆ ಮಾತನಾಡಿದ ಪರಮೇಶ್ವರ್, ಸಿಂದಗಿಯಲ್ಲಿ ಜೆಡಿಎಸ್ ಪ್ರಾಬಲ್ಯ ಗಳಿಸಿತ್ತು. ಆದ್ರೆ ಈಗ ಎರಡು ಕ್ಷೇತ್ರದಲ್ಲೂ ಸೋಲು ಅನುಭವಿಸಿದೆ. ಕಾಂಗ್ರೆಸ್ ಮುಖಂಡರು ಇನ್ನು ಪರಿಣಾಮಕಾರಿಯಾಗಿ ಕೆಲಸ ಮಾಡ್ಬೇಕಿದೆ. ಒಂದು ಸೀಟು ಗೆದ್ದರೆ ಸಾಲದು ಇನ್ನೂ ಗೆಲ್ಲಬೇಕು ಎಂದಿದ್ದಾರೆ.