Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್ : ಕುಟುಂಬದವರ ಬಗ್ಗೆ ವದಂತಿ ಹಬ್ಬಿದ್ದೇಕೆ..

Facebook
Twitter
Telegram
WhatsApp

ಬೆಂಗಳೂರು: ಈ ವಾರದ ನಾಮಿನೇಷನ್ ನಿಂದ ಗೋಲ್ಡ್ ಸುರೇಶ್ ಬಚಾವ್ ಆಗಿದ್ದರು. ಆದರೂ ಸಹ ಮನೆಯಿಂದ ಹೊರಗೆ ಬಂದಿದ್ದಾರೆ. ತುರ್ತು ಪರಿಸ್ಥಿತಿಯಿಂದ ಹೊರಗೆ ಬಂದಿದ್ದಾರೆ. ಆದರೆ ಅವರ ಕುಟುಂಬಸ್ಥರೆಲ್ಲ ಆರೋಗ್ಯವಾಗಿಯೇ ಇದ್ದಾರೆ. ಆದರೂ ಈ ರೀತಿಯ ಸುದ್ದಿಯೊಂದು ಹಬ್ಬಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಬಿಗ್ ಬಾಸ್ ಬಿಟ್ಟೊರುವ ಪ್ರೋಮೋದಲ್ಲಿ ‘ಮನೆಹಲ್ಲಿರುವ ಒಬ್ಬರು ಹೊರಗೆ ಬರಬೇಕಿದೆ. ಅವರ ಅಗತ್ಯ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚಾಗಿದೆ. ಗೋಲ್ಡ್ ಸುರೇಶ್ ನಿಮ್ಮ ವಸ್ತುಗಳನ್ನೆಲ್ಲ ತೆಗೆದುಕೊಂಡು ಹೊರಡಿ’ ಎಂದಿದ್ದಾರೆ. ಒಂದು ಕ್ಷಣ ಎಲ್ಲರು ಶಾಕ್ ಆಗಿದ್ದಾರೆ. ಹನುಮಂತು ಅಂತು ಮಾವನಿಗೆ ಸಮಾಧಾನ ಮಾಡಿದ್ದಾರೆ. ಗೋಲ್ಡ್ ಸುರೇಶ್ ಕೂಡ ತಾಯಿ ಏನು ಆಗದಂತೆ ನೋಡಿಕೊಳ್ಳುತ್ತಾಳೆಂದು ಸಮಾಧಾನ ಮಾಡಿಕೊಂಡು ಹೊರಟಿದ್ದಾರೆ.

ಗೋಲ್ಡ್ ಸುರೇಶ್ ಮೂಲತಃ ಬೆಳಗಾವಿಯ ಅಥಣಿಯವರು. ಅವರ ತಂದೆ, ಸಹೋದರರು ಬೆಳಗಾವಿಯಲ್ಲಿಯೆರ ಇರುವುದು. ಈ ರೀತಿಯಾದ ಸುದ್ದಿಯೊಂದು ಹೊರಬಿದ್ದ ಬಳಿಕ ವಿಡಿಯೋ ಕಿಉಡ ಹಂಚಿಕೊಂಡಿದ್ದಾರೆ. ತಂದೆ ಹಾಗೂ ಸೋದರಿರಿಬ್ಬರು ಕ್ಷೇಮವಾಗಿರುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಎಲಿಮಿನೇಷನ್ ಇದ್ದ ದಿನವೇ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರ ಬಂದಿದ್ದೇಕೆ ಎಂಬ ಅನುಮಾನಗಳು ಮೂಡಿವೆ. ಈ ರೀತಿಯ ವದಂತಿಗಳನ್ನು ಹಬ್ಬಿಸಿದ್ಯಾರು, ಬಿಗ್ ಬಾಸ್ ತನಕ ತಂದಿದ್ಯಾರು ಗೊತ್ತಾಗುತ್ತಿಲ್ಲ. ನಾಮಿನೇಷನ್ ಟ್ವಿಸ್ಟ್ ಕೊಟ್ಟರು ಫ್ಯಾಮಿಲಿ ವಿಚಾರದಲ್ಲಿ ಬಿಗ್ ಬಾಸ್ ಹುಡುಗಾಟ ಆಡಲ್ಲ. ಹೀಗಾಗಿ ಏನಾಯ್ತು ಎಂಬುದು ಇವತ್ತಿನ ಕಿಚ್ಚನ ಪಂಚಾಯ್ತಿಯಿಂದ ತಿಳಿಯಲಿದೆ. ಆದ್ರೆ ಬಿಗ್ ಬಾಸ್ ಮಂದಿ ಮಾತ್ರ ಟೆನ್ಶನ್ ನಲ್ಲಿದ್ರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಸದುರ್ಗ | ಖಜಾನೆ ಎಫ್‌ಡಿಎ ಮತ್ತು ಅಕೌಂಟೆಂಟ್ ಲೋಕಾಯುಕ್ತ ಬಲೆಗೆ

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಲೋಕಾಯುಕ್ತ ಅಧಿಕಾರಿಗಳು ಬುಧವಾರ ಹೊಸದುರ್ಗ ಖಜಾನೆ ಇಲಾಖೆ ಮೇಲೆ ದಾಳಿ ನಡೆಸಿ, ಇಬ್ಬರು ಲಂಚ ಸ್ವೀಕರಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊಸದುರ್ಗ ಪಟ್ಟಣದ ಖಜಾನೆ ಇಲಾಖೆ ಎಫ್‌ಡಿಎ ವರಲಕ್ಷ್ಮೀ,

ಚಿತ್ರದುರ್ಗ | ಕನ್ನಡ ಶಿಕ್ಷಕಿ ಕಲಾಂಜಲಿ ಇನ್ನಿಲ್ಲ; ವಿದ್ಯಾರ್ಥಿಗಳು ಕಣ್ಣೀರು

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್, 18: ಚಿನ್ನೂಲಾದ್ರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಸ್ವೀಟಿ ಕಲಾಂಜಲಿ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಬೆಂಗಳೂರಿನ

ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಾ ಇದ್ದೀರಾ..? ಇಲ್ಲಿದೆ ನೋಡಿ ಸಿಹಿ ಸುದ್ದಿ..!

ಸಾಜಷ್ಟು ಜನ ತಮಗೆ ಸ್ಥಳೀಯವಾಗಿ ಕೆಲಸ ಸಿಕ್ಕರೆ ಸಾಕು ಎಂದು ಕಾಯುತ್ತಾ ಇರುತ್ತಾರೆ. ಒಂದು ವೇಳೆ ನೀವೂ ಶಿವಮಿಗ್ಗದವರಾಗಿದ್ದು ಶಿವಮೊಗ್ಗದಲ್ಲಿಯೇ ಕೆಲಸ ಹುಡುಕುತ್ತಿದ್ದರೆ, ಪದವಿ ಪಡೆದವರಾಗಿದ್ದರೆ ಈ ಕೆಲಸಕ್ಕೆ ಅರ್ಜಿ ಹಾಕಿ. ಡಿಸೆಂಬರ್ 23ಕ್ಕೆ

error: Content is protected !!