ಕಳೆದ ಮೂರ್ನಾಲ್ಕು ದಿನದಿಂದ ಇಳಿಕೆಯಾಗುತ್ತಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಶುಕ್ರವಾರದವರೆಗೂ 120 ರೂಪಾಯಿ ಅಷ್ಟು ಇಳಿಕೆಯಾಗಿತ್ತು. ಇದೀಗ ಇಂದು ಒಂದೇ ದಿನ 40 ರೂಪಾಯಿ ಅಷ್ಟು ಏರಿಕೆಯಾಗಿದೆ. ಈ ಮೂಲಕ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 7,100 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಗ್ರಾಂಗೆ 7,745 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಗ್ರಾಂಗೆ 1 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಗ್ರಾಂಗೆ 91.50 ರೂಪಾಯಿ ಏರಿಕೆಯಾಗಿದೆ.
ಸದ್ಯ ಭಾರತದಲ್ಲಿ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ದರ 71,000 ರೂಪಾಯಿ ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನ ಹತ್ತು ಗ್ರಾಂಗೆ 77,450 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,150 ರೂಪಾಯಿ ಇದೆ. ಉಳಿದಂತೆ ಬೇರೆ ಬೇರೆ ನಗರದಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ ಇಲ್ಲಿದೆ ಮಾಹಿತಿ.
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 71,000 ಇದೆ. ದೆಹಲಿಯಲ್ಲಿ ಮಾತ್ರ 71,150 ರೂಪಾಯಿ ಇದೆ. ಅಹ್ಮದಾಬಾದ್ ನಲ್ಲಿ 70,050 ರೂಪಾಯಿ ಇದೆ. ಜೈಪುರ, ಲಕ್ನೊದಲ್ಲಿ 71,150 ರೂಪಾಯಿ ಇದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಒಂದಷ್ಟು ನಗರಗಳಲ್ಲಿ ವ್ಯತ್ಯಾಸವಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ, ಲಕ್ನೋ ನಗರದಲ್ಲಿ ನೂರು ಗ್ರಾಂಗೆ 9,150 ರೂಪಾಯಿ ಇದೆ. ಚೆನ್ನೈನಲ್ಲಿ 9,900 ರೂಪಾಯಿ ಇದೆ.