ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ತಮಿಳುನಾಡು ನೀಲಗಿರಿ ಜಿಲ್ಲೆಯ ಕುಣೂರಿನಲ್ಲಿ ಪತನಗೊಂಡಿದೆ. ಇದರಲ್ಲಿ ಒಟ್ಟು 14 ಜನ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಅದರಲ್ಲಿ 11 ಜನ ಮೃತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
CDS General Bipin Rawat's chopper crashes in Tamil Nadu. Eleven people have been confirmed dead.
(@Rahulshrivstv)#TamilNadu #Coonoor #bipinrawat #News pic.twitter.com/oi36T2hLQj— IndiaToday (@IndiaToday) December 8, 2021
ಕುಟುಂಬದ ಸದಸ್ಯರು ಹಾಗೂ ಗಣ್ಯರು ಕೂಡ ಈ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ 11 ಜನ ಮೃತರಲ್ಲಿ ಯಾರೆಲ್ಲಾ ಸೇರಿದ್ದಾರೆ ಎಂಬ ಮಾಹಿತಿ ಇಲ್ಲ. ಸೇನಾ ಸಿಬ್ಬಂದಿಯ ಮುಖ್ಯಸ್ಥ ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಈ ಘಟನೆ ಸಂಬಂಧ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬಳೀ ದುರಂಗ ಹೇಗಾಯ್ತು..? ಯಾಕಾಯ್ತು ಎಂಬ ಬಗ್ಗೆಯೂ ಇಂಚಿಂಚು ಮಾಹಿತಿ ಪಡೆದುಕೊಂಡಿದ್ದಾರೆ. ರಾವತ್ ಅವರ ಬೇಗ ಗುಣಮುಖರಾಗಲಿ ಎಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ.